ಚಿತ್ರಕಲಾ ಪರೀಕ್ಷೆ: ಹಿರೆಬಂಡಾಡಿ ಶಾಲಾ ಮೂವರು ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್

0

ಹಿರೆಬಂಡಾಡಿ: ಕೆಎಸ್‌ಇಇಬಿ ಮಂಡಳಿ ವತಿಯಿಂದ ನಡೆಸಲ್ಪಡುವ 2024-25ನೇ ಸಾಲಿನ ಚಿತ್ರಕಲಾ ಪರೀಕ್ಷೆಯಲ್ಲಿ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.


ಹೈಯರ್ ಗ್ರೇಡ್ ಪರೀಕ್ಷೆಗೆ ಹಾಜರಾದ 9 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಇಬ್ಬರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಮಹಮ್ಮದ್ ಮುನೀಫ್ 600 ರಲ್ಲಿ 443 ಅಂಕಗಳು ಎ.ಆದಿಲ್ ಅಹಮ್ಮದ್ 600 ರಲ್ಲಿ 420 ಅಂಕಗಳೊಂದಿಗೆ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಲೋಯರ್ ಗ್ರೇಡ್ ಪರೀಕ್ಷೆಯಲ್ಲಿ ಏಳು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೂ ಓರ್ವ ವಿದ್ಯಾರ್ಥಿನಿ ಡಿಸ್ಟಿಂಕ್ಷನ್ ಉತ್ತೀರ್ಣರಾಗಿದ್ದಾರೆ. ಅನುಶ್ರೀ 600 ರಲ್ಲಿ 471 ಅಂಕಗಳನ್ನು ಪಡೆದು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here