ಡಿ.25: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಅದ್ದೂರಿ ಸಂಭ್ರಮ- ದರ್ಬೆ ಫಾ.ಪತ್ರಾವೋ ಸರ್ಕಲ್ ನಿಂದ ಬಸ್ಸು ನಿಲ್ದಾಣವರೆಗೆ ಆಕರ್ಷಕ ಮೆರವಣಿಗೆ

0

ಪುತ್ತೂರು: ಪುತ್ತೂರು, ಮರೀಲ್ ಹಾಗೂ ಬನ್ನೂರು ಕ್ರೈಸ್ತ ಹಬ್ಬಗಳ ಆಚರಣಾ ಸಮಿತಿ(ಪಿ.ಎಂ.ಬಿ)ಯ ನೇತೃತ್ವದಲ್ಲಿ ಕ್ರೈಸ್ತ ಬಾಂಧವರ ಮಹತ್ವದ ಹಬ್ಬವೆನಿಸಿದ ಪ್ರಭು ಯೇಸುಕ್ರಿಸ್ತರ ಜನನವನ್ನು ಸಾರುವ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿ.25 ರಂದು ಸಂಜೆ ದರ್ಬೆ ಫಾ.ಪತ್ರಾವೋ ಸರ್ಕಲ್ ಬಳಿಯಿಂದ ಪುತ್ತೂರು ಮುಖ್ಯರಸ್ತೆಯ ಚರ್ಚ್ ವರೆಗೆ ಆಕರ್ಷಕ ಮೆರವಣಿಗೆ ನಡೆಯಲಿರುವುದು.

ಬಹಳ ವರ್ಷದ ಬಳಿಕ ಈ ಕ್ರಿಸ್ಮಸ್ ಮೆರವಣಿಗೆಯು ಜರಗಲಿದ್ದು, ಈ ಕ್ರಿಸ್ಮಸ್ ಹಬ್ಬದ ಸಂಭ್ರಮದ ಮೆರವಣಿಗೆಯಲ್ಲಿ ಕೊಂಕಣಿ ಬ್ಯಾಂಡ್, ನಾಸಿಕ್ ಬ್ಯಾಂಡ್, ಡಿ.ಜೆ, ಡ್ಯಾನ್ಸ್, ಸಾಂತಾಕ್ಲಾಸ್, ಟ್ಯಾಬ್ಲೋ ಇತ್ಯಾದಿಗಳ ಜೊತೆಗೆ ಮೆರವಣಿಗೆಯು ಸಾಗಲಿರುವುದು. ಈ ಕ್ರಿಸ್ಮಸ್ ಮೆರವಣಿಗೆಯಲ್ಲಿ ಸಾಂತಾಕ್ಲಾಸ್ ಪೋಷಾಕು ಧರಿಸಿ ಭಾಗವಹಿಸುವವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಆದ್ದರಿಂದ ಪುತ್ತೂರು, ಮರೀಲು,ಬನ್ನೂರು ಸಹಿತ ಇತರ ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕ್ರಿಸ್ಮಸ್ ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕಾಗಿ ಪುತ್ತೂ, ಮರೀಲು, ಬನ್ನೂರು ಕ್ರೈಸ್ತ ಹಬ್ಬಗಳ ಆಚರಣಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಘಾಟನೆ..
ಮೆರವಣಿಗೆಯ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಅಮಲ ರಾಮಚಂದ್ರ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಮಾಜಿ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ, ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ ರವರು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಪುತ್ತೂರು ಬಸ್ಸುನಿಲ್ದಾಣದ ಬಳಿ ಸಮಾರೋಪ ನಡೆಯಲಿದೆ.

LEAVE A REPLY

Please enter your comment!
Please enter your name here