ಪುತ್ತೂರು: 34 ನೆಕ್ಕಿಲಾಡಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಡಿ.21ರಂದು ಶಾಲಾ ವಾರ್ಷಿಕೋತ್ಸವ ನಡೆಯಿತು.ಉಪ್ಪಿನಂಗಡಿ ಜೋಸ್ಸಿಸ್ ಆಯುರ್ವೇದ ಆಸ್ಪತ್ರೆ ಆಯುರ್ವೇದ ವೈದ್ಯ ಡಾ.ಸುಪ್ರಿತ್ ಲೋಬೋ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳಿಂದ ಉಪ್ಸ್ ಹಾಗೂ ಕಾಟಿ ಮತ್ತು ಸಾರಿ ನೃತ್ಯ ಪ್ರದರ್ಶನ ವಿವಿಧ ವಿನೋದಾವಳಿ ಜರಗಿತು.
ಎಸ್ ಡಿಎಂಸಿ ಅಧ್ಯಕ್ಷ ರಾಜೀವ ನಾಯ್ಕರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯಕುಮಾರ್, ಗೀತಾ, ರಮೇಶ್ ನಾಯ್ಕ,ಪುತ್ತೂರು ತಾಲೂಕು ಪಿ.ಎಮ್ ಪೋಷನ್ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್, ಕೋಡಿಂಬಾಡಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಮಹಮ್ಮದ್ ಅಶ್ರಫ್. ಕೆ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಕ್ಕಿಲಾಡಿ ಒಕ್ಕೂಟದ ಅಧ್ಯಕ್ಷ ಧರ್ಣಪ್ಪ ಗೌಡ, ನಮ್ಮೂರು ನಮ್ಮವರು ಮೈಂದಡ್ಕ ಸದಸ್ಯ ಗಣೇಶ್ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಹಮದ್ ನಜೀರ್, ಪ್ರಭಾರ ಮುಖ್ಯ ಗುರುಗಳು ಕಾವೇರಿ ಸಿ ಉಪಸ್ಥಿತರಿದ್ದು ಶುಭಹಾರೈಸಿದರು.
ಮುಖ್ಯ ಗುರುಗಳು ಸ್ವಾಗತಿಸಿ, ಸಹ ಶಿಕ್ಷಕಿ ಪದ್ಮ ವಂದಿಸಿದರು. ಸಹಶಿಕ್ಷಕಿ ಕವಿತಾ ಇವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಉಷಾ ಕುಮಾರಿ ಪೂರ್ಣಿಮಾ ಮತ್ತು ಅಶ್ವಿನಿ, ಮಕ್ಕಳ ಆಟೋಟ ಮತ್ತು ಒಳಾಂಗಣ ಸ್ಪರ್ಧಾ ಬಹುಮಾನ ವಿತರಣಾ ಪಟ್ಟಿ ವಾಚಿಸಿದರು. ಸಭೆಯ ಬಳಿಕ ಅಂಗನವಾಡಿ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಶಾಲಾ ಮಕ್ಕಳ ಹಾಗೂ ಹಿರಿಯ ವಿದ್ಯಾರ್ಥಿಗಳ ಜೊತೆಗೆ ಅಂಗನವಾಡಿ ಮಕ್ಕಳಿಗೆ ಆಯೋಜಿಸಿದ್ದ ಛದ್ಮವೇಷ ಕಾರ್ಯಕ್ರಮ ನಡೆಯಿತು.
ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಪುತ್ತೂರಿನ ಶಾಸಕ ಅಶೋಕ್ ರೈ ಇವರ ಅನುಪಸ್ಥಿತಿಯಲ್ಲಿ ಗ್ರಾಮ ಪಂಚಾಯತ್ 34 ನೆಕ್ಕಿಲಾಡಿಯ ಅಧ್ಯಕ್ಷೆ ಸುಜಾತ ರೈ ಇವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಪ್ರಶಾಂತ್ ಎನ್, ಗ್ರಾ.ಪಂ.ಸದಸ್ಯ ಸ್ವಪ್ನ ಜೀವನ್, ಸರಕಾರಿ ಪ್ರೌಢಶಾಲೆ ಪುತ್ತಿಲ ಸಹ ಶಿಕ್ಷಕ ಸೆವ್ರಿನ್ ಮಾರ್ಟಿಸ್, ಉದ್ಯಮಿ ಸಾದಿಕ್ ಆದರ್ಶನಗರ, ಪುತ್ತೂರು ತಾಲೂಕು ಭೂನ್ಯಾಯ ಮಂಡಳಿ ಯೂನಿಕ್ ಸದಸ್ಯ ಅಬ್ದುಲ್ ರಹಿಮಾನ್, ಶಾಲಾ ನಾಯಕ ಯನ್ವಿತ್.ಎ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಭಾರ ಮುಖ್ಯಗುರು ಕಾವೇರಿ ಸಿ ಸ್ವಾಗತದೊಂದಿಗೆ ವರದಿ ವಾಚಿಸಿದರು. ಬಳಿಕ ಒಂದರಿಂದ ಏಳನೇ ತರಗತಿಯ ದತ್ತಿನಿಧಿ ನಗದು ಹಾಗೂ ಕಲಿಕೆಯ ಪ್ರಶಸ್ತಿಯ ಬಹುಮಾನ ವಿತರಣೆ ನಡೆಯಿತು. ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಜಯಮ್ಮ ಹಾಗೂ ಅಕ್ಬರ್ ಹುಸೇನ್ ಇವರನ್ನು ಸನ್ಮಾನಿಸಲಾಯಿತು. ಸಹ ಶಿಕ್ಷಕಿ ಪದ್ಮ ವಂದಿಸಿದರು. ಬಳಿಕ ಮಕ್ಕಳ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.