ಪುತ್ತೂರು: ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿ.21ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ವೇಣುಗೋಪಾಲ್ ಪುತ್ತೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸ್ಯಾಕ್ಸೋಫೋನ್ ಕಚೇರಿ ನಡೆಯಿತು. ವಯಲಿನ್ ನಲ್ಲಿ ವಿದ್ವಾನ್ ವೇಣುಗೋಪಾಲ್ ಶಾನುಭೋಗ್, ಮೃದಂಗದಲ್ಲಿ ಡಾಟ ಅಕ್ಷಯ ನಾರಾಯಣ ಕಾಂಚನ, ತವಿಲ್ ನಲ್ಲಿ ಸಚಿನ್ ಮೈಸೂರು, ಮೋರ್ಚಿಂಗ್ ನಲ್ಲಿ ವಿದ್ವಾನ್ ಬಾಲಕೃಷ್ಣ ಭಟ್, ತಾಳದಲ್ಲಿ ಪದ್ಮರಾಜ್ ಬನ್ನೂರು ಸಹಕರಿಸಿದರು.