ನಾಳೆ(ಡಿ.24)ಇಲ್ಲೆಲ್ಲಾ ಕರೆಂಟಿಲ್ಲಾ…!

0

ಪುತ್ತೂರು: 33ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ದ್ವಿ ಪಥ ಮಾರ್ಗವನ್ನಾಗಿ ಬದಲಾಯಿಸುವ ಹಾಗೂ 33ಕೆ.ವಿ ಮಾಡಾವು ಸವಣೂರು ಲೈನಿನ ನಿರ್ಮಾಣ ಕಾಮಗಾರಿಯ ಸಲುವಾಗಿ ಡಿ.24ರಂದು ಪೂರ್ವಾಹ್ನ 9:30 ರಿಂದ ಸಂಜೆ 5 ಗಂಟೆಯ ತನಕ ವಿದ್ಯುತ್ ನಿಲುಗಡೆಯಾಗಲಿದೆ.

33/11ಕೆವಿ ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ದೇರ್ಲ, ಮದ್ಲ, ತಿಂಗಳಾಡಿ, ಇರ್ದೆ, ಪಾಣಾಜೆ ಮತ್ತು ಸುಳ್ಯಪದವು ಹಾಗೂ 110/33/11 ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕೈಕಂಬ, ಕುಮಾರಮಂಗಲ, ಮಣಿಕ್ಕರ, ಮಂಜುನಾಥನಗರ ಹಾಗೂ 33/11 ಕೆವಿ ಕಾವು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈಶ್ವರಮಂಗಲ ಟೌನ್, ಕರ್ನೂರು ಹಾಗೂ ಕನಕಮಜಲು ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಂಬಂಧಪಟ್ಟ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here