ನಾಮಪತ್ರ ವಾಪಸ್ ಪಡೆಯುವ ಮೂಲಕ ಕಣದಿಂದ ಹಿಂದೆ ಸರಿದ ಸಹಕಾರ ಭಾರತಿ ಬೆಂಬಲಿತ ಸದಸ್ಯರು
ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ 12 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಡಿ.29ರಂದು ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಬೇಕಾಗಿದ್ದು ಡಿ.23ರಂದು ನಾಮ ಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳೆಲ್ಲರೂ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ 12 ಮಂದಿ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಶೋಭಾ ಎನ್.ಎಸ್ ಅವಿರೋಧ ಆಯ್ಕೆ ಬಗ್ಗೆ ಘೋಷಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಮತ್ತು ಸಿಬ್ಬಂದಿಗಳು ಸಹಕರಿಸಿದರು.
ಸಾಮಾನ್ಯ ಕ್ಷೇತ್ರ:
5 ಸ್ಥಾನ ಹೊಂದಿರುವ ಸಾಮಾನ್ಯ ಕ್ಷೇತ್ರದಿಂದ 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಹಾಲಿ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಹಾಲಿ ಉಪಾಧ್ಯಕ್ಷ ಯಾಕೂಬ್ ಮುಲಾರ್, ಹಾಲಿ ನಿರ್ದೇಶಕರಾದ ಎಸ್.ಡಿ ವಸಂತ, ಶಿವನಾಥ ರೈ ಮೇಗಿನಗುತ್ತು, ಸುಧೀರ್‌ಕೃಷ್ಣ ಪಡ್ಡಿಲ್ಲಾಯ, ಇಬ್ರಾಹಿಂ ಮುಲಾರ್, ಅಣ್ಣಿ ಪೂಜಾರಿ ಹಾಗೂ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾಗಿ ಶಂಕರನಾರಾಯಣ ರಾವ್, ಬಾಲಚಂದ್ರ ಸೊರಕೆ, ಹಾಗೂ ಅಶೋಕ್ ರೈ ಸೊರಕೆ, ನಾರಾಯಣ, ಸುರೇಶ್ ಕಣ್ಣಾರಾಯ, ಜಗದೀಶ ಬಿ, ಹಾಗೂ ರಮೇಶ್ ಗೌಡ ಪಜಿಮಣ್ಣು ನಾಮಪತ್ರ ಸಲ್ಲಿಸಿದ್ದರು.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ:
1 ಸ್ಥಾನ ಹೊಂದಿರುವ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೊರಗಪ್ಪ ಸೊರಕೆ ನಾಮಪತ್ರ ಸಲ್ಲಿಸಿದ್ದರು.
ಪರಿಶಿಷ್ಠ ಪಂಗಡ:
1 ಸ್ಥಾನ ಹೊಂದಿರುವ ಪರಿಶಿಷ್ಠ ಪಂಗಡ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಾಗಿ ಪದ್ಮಯ್ಯ ಪಿ ಹಾಗೂ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಯಾಗಿ ಸುಂದರ ನಾಯ್ಕ ಬಿ.ಕೆ ನಾಮಪತ್ರ ಸಲ್ಲಿಸಿದ್ದರು.
ಹಿಂದುಳಿದ ಪ್ರವರ್ಗ ಎ ಮೀಸಲು:
1 ಸ್ಥಾನ ಹೊಂದಿರುವ ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಾಗಿ ಆನಂದ ಪೂಜಾರಿ ಕೈಯೊಳುಂಕು ಹಾಗೂ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ ಎನ್‌ಎಸ್‌ಡಿ ಹಾಗೂ ವಾಸುದೇವ ಕೆ ನಾಮಪತ್ರ ಸಲ್ಲಿಸಿದ್ದರು.
ಹಿಂದುಳಿದ ಪ್ರವರ್ಗ ಬಿ ಕ್ಷೇತ್ರ:
1 ಸ್ಥಾನ ಹೊಂದಿರುವ ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಸಂತ ಬಿ.ಎನ್ ಹಾಗೂ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಯಾಗಿ ಉಮೇಶ್ ಅಂಬಟ ನಾಮಪತ್ರ ಸಲ್ಲಿಸಿದ್ದರು.
ಮಹಿಳಾ ಮೀಸಲು ಕ್ಷೇತ್ರ:
2 ಸ್ಥಾನ ಹೊಂದಿರುವ ಮಹಿಳಾ ಮೀಸಲು ಕ್ಷೇತ್ರಕ್ಕೆ ಗುಲಾಬಿ ಎನ್ ಶೆಟ್ಟಿ ಹಾಗೂ ನಯನಾ ಗಣೇಶ್ ನಾಮಪತ್ರ ಸಲ್ಲಿಸಿದ್ದರು.
ಸಾಲಗಾರರಲ್ಲದ ಕ್ಷೇತ್ರ:
1 ಸ್ಥಾನ ಹೊಂದಿರುವ ಸಾಲಗಾರರಲ್ಲದ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶರಣ್ ರೈ ಎಂ ಹಾಗೂ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾಗಿ ಗೌತಮ್ ಎಸ್ ಹಾಗೂ ಯತೀಶ್ ಟಿ ನಾಮಪತ್ರ ಸಲ್ಲಿಸಿದ್ದರು.