ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ ಹಂತದ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮವು ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ದ.23 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕಿ (ಕೆನರಾ ಬ್ಯಾಂಕ್ ) ಗೀತವಿಜಯ್‌ರವರು ಗ್ರಾಮಸ್ಥರಿಗೆ ಬ್ಯಾಂಕ್ ಗಳಲ್ಲಿರುವ ಯೋಜನೆಗಳ ಬಗ್ಗೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳ ಮಾಹಿತಿ ನೀಡಿದರು.
ಮತ್ತು ಕೆಯ್ಯೂರು ಗ್ರಾಮದ ಉದ್ದೋಳೆ ನಿವಾಸಿ ಸಚಿನ್ ಇವರಿಗೆ ಸಾಮಾನ್ಯ ಸಾವು ಸಂಭವಿಸಿದ್ದು, ಇವರು ಈ ಮೊದಲೇ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾಯೋಜನೆಯನ್ನು ಕರ್ನಾಟಕ ಬ್ಯಾಂಕ್ ಕೆಯ್ಯೂರು ಇಲ್ಲಿ ನೋಂದಾವಣೆ ಮಾಡಿಸಿರುತ್ತಾರೆ. ಇವರ ನಾಮಿನಿ ತಂದೆ ಕುಶಾಲಪ್ಪ ಗೌಡ ಇವರಿಗೆ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಕೆಯ್ಯೂರು ಪ್ರಬಂದಕ ಸುಬ್ರಹ್ಮಣ್ಯ. ಎಂ ಇವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು 2 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು. ಗೀತಾ ಸಿ.ಎಪ್.ಎಲ್ ಬೆಳ್ತಂಗಡಿ . (ಮದರ್ ಸಂಸ್ಥೆ ರೋಣ) ಇವರು ಗ್ರಾಮಸ್ಥರಿಗೆ ಹೊಸದಾಗಿ ವಿಮೆಗಳ ನೋಂದಾಣಿ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ.ಎ.ಕೆ, ಸದಸ್ಯರುಗಳಾದ ಮಮತಾ ರೈ, ನೆಬಿಸಾ, ಜಯಂತ. ಕೆ, ತಾರನಾಥ, ತಿಂಗಳಾಡಿ ಕೆನರಾ ಬ್ಯಾಂಕ್ ಮ್ಯಾನೇಜರ್ ಸುಬ್ಬದಾಸ್, ಕೆಯ್ಯೂರು ಕರ್ಣಾಟಕ ಬ್ಯಾಂಕ್ ಮ್ಯಾನೇಜರ್ ಸುಬ್ರಹ್ಮಣ್ಯ ಎಂ ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದ್ದರು.