ಕಾಣಿಯೂರು: ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುವ ಶೂ, ಸಾಕ್ಸ್ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ದಲಾರಿ, ಮುಖ್ಯಗುರು ಪದ್ಮಯ ಗೌಡ, ಸಹ ಶಿಕ್ಷಕರಾದ ಸುನಿಲ್, ಮೋಹಿನಿ, ಶೋಭಾ, ನಂದಿನಿ, ಗೌರವ ಶಿಕ್ಷಕಿ ಶಿಶ್ಮಿತಾ ರೈ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.