ಪುತ್ತೂರು ಭಾ.ಕೃ.ಸಂ.ಪ. ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ರೈತ ದಿನಾಚರಣೆ

0

ಪುತ್ತೂರು: ಭಾ.ಕೃ.ಸಂ.ಪ.-  ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರಿನಲ್ಲಿ ಡಿ.23ರಂದು ರೈತ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ಪುತ್ತೂರು ಸಾಮಾಜಿಕ ಕಲ್ಯಾಣ ಇಲಾಖೆ ಮೇಲ್ವಿಚಾರಕ ಅಧಿಕಾರಿ ವಿಶ್ವನಾಥ್ ಭಾಗವಹಿಸಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಇರುವ ವಿವಿಧ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.

ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಜೆ. ದಿನಕರ ಅಡಿಗ ಅಧ್ಯಕ್ಷತೆ ವಹಿಸಿ, ಕೃಷಿಕರ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ, ಆಹಾರ ಭದ್ರತೆ ಸಾಧನೆಯ ಉಲ್ಬಣಗಳನ್ನು ಮತ್ತು ಇದರಲ್ಲಿ ಕೃಷಿಕರ ಪಾತ್ರದ ಮಹತ್ವವನ್ನು ತಿಳಿಸಿದರು.  ಪರಿಶಿಷ್ಟ ಪಂಗಡಗಳ (TSP) ಯೋಜನೆಯಡಿ ನಿರ್ದೇಶನಾಲಯದಿಂದ ನೀಡುವ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಕೃಷಿಕರಿಗೆ ಪ್ರೇರಣೆ ನೀಡಿದರು. 

ವಿಜ್ಞಾನಿ, TSP ಯೋಜನೆಯ ನೋಡಲ್ ಅಧಿಕಾರಿ ಡಾ. ಮಂಜುನಾಥ ಕೆ ವಿವಿಧ ಚಟುವಟಿಕೆಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿದರು. ಪರಿಶಿಷ್ಟ ಪಂಗಡಗಳ (TSP) ಯೋಜನೆಯಡಿ ಹಣ್ಣು-ತರಕಾರಿಯ, ಬೀಜಗಳು ತೋಟದ ಸಾಧನಗಳು, ಸೌರ ದೀಪಗಳು ಮತ್ತು ತಾರ್ಪಾಲಿನ್‌ಗಳ ವಿತರಣೆಯನ್ನು ಹಮ್ಮಿಕೊಳ್ಳಲಾಯಿತು. 

ವಿಜ್ಞಾನಿ ಡಾ. ಭಾಗ್ಯ ಎಚ್. ಪಿ. “ದಕ್ಷಿಣ ಕನ್ನಡದಲ್ಲಿ ಗೇರು ಬೆಳೆಯ ಹೂಡಿಕೆ” ಕುರಿತು ಜ್ಞಾನಭರಿತ ಉಪನ್ಯಾಸ ನೀಡಿದರು.ನಲವತ್ತೆಂಟು ಮಂದಿ ಕೃಷಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಹಾಗೂ ಅನುಭವಗಳನ್ನು ಹಂಚಿಕೊಂಡರು.

LEAVE A REPLY

Please enter your comment!
Please enter your name here