ಪುತ್ತೂರು: ಮುಂಡೂರು ಗ್ರಾಮದ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.1ರಂದು ನಡೆಯಲಿರುವ ಒತ್ತೆಕೋಲಕ್ಕೆ ಡಿ.25ರಂದು ಗೊನೆಮುಹೂರ್ತ ನೆರವೇರಿತು.
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗೊನೆ ಕಡಿಯಲಾಯಿತು. ಒತ್ತೆಕೋಲ ಸಮಿತಿ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಈಶ್ವರ ನಾಯ್ಕ ಅಜಲಾಡಿ, ಬಾಲಕೃಷ್ಣ ಶೆಟ್ಟಿ ಪಂಜಲ, ಸದಾಶಿವ ಗೌಡ ಮುಂಡೂರು, ಚಂದ್ರಹಾಸ ಕೊರುಂಗು, ಗಣೇಶ್ ಸುವರ್ಣ ಬೊಲ್ಲಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.