ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ನ ಸರಾಫ್ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಶ್ಯಾಮ್ ಭಟ್(71ವ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.28ರಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ಮುಳಿಯ ಶ್ಯಾಮ್ ಭಟ್, ಪುತ್ರರಾದ ಮುಳಿಯ ಜ್ಯುವೆಲ್ಸ್ನ ಸಿಎಂಡಿ ಕೇಶವ ಪ್ರಸಾದ್, ಎಂಡಿ ಕೃಷ್ಣ ನಾರಾಯಣ, ಪುತ್ರಿ ಡಾ.ವಿದ್ಯಾ ಸರಸ್ವತಿ, ಸೊಸೆಯಂದಿರಾದ ಕೃಷ್ಣವೇಣಿಪ್ರಸಾದ್, ಅಶ್ವಿನಿಕೃಷ್ಣ ಮುಳಿಯ, ಅಳಿಯ ಡಾ. ಶ್ಯಾಮ್ ಸುಂದರ್ ಮತ್ತು ಮೊಮ್ಮಕ್ಕಳಾದ ಅತುಲ್ ತೇಜಸ್ವಿ, ಆದ್ಯ ಸುಲೋಚನಾ, ಇಶಾ ಸುಲೋಚನಾ, ಅಪೂರ್ವ ಮನಸ್ವಿನಿ, ಮುಕುಂದ ಶ್ಯಾಮ್, ಆಪ್ತ ಚಂದ್ರಮತಿ ಅವರನ್ನು ಅಗಲಿದ್ದಾರೆ.
ಆ.29ಕ್ಕೆ ಅಂತ್ಯಸಂಸ್ಕಾರ:
ಮೃತರ ಅಂತಿಮ ವಿಧಿವಿಧಾನಗಳು ಆ.29ರಂದು ಬೆಳಿಗ್ಗೆ 8.30 ಗಂಟೆಗೆ ಪಾಂಗಳಾಯಿ ಶ್ಯಾಮ ಸುಲೋಚನಾ ಮನೆಯ ತೋಟದಲ್ಲಿ ನಡೆಯಲಿದೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.