ಪುತ್ತೂರು: ವಾಗ್ದೇವಿ ಸಂಗೀತ ಶಾಲೆ ಇದರ ಪುತ್ತೂರು, ಕೌಡಿಚ್ಚಾರು ಮತ್ತು ಜಾಲ್ಸೂರು ಶಾಖೆಯ ಸಂಗೀತ ವಿದ್ಯಾರ್ಥಿಗಳ ವಾಗ್ದೇವಿ ಸಂಗೀತೋತ್ಸವವು ಇಂದು ಬೆಳಿಗ್ಗೆಯಿಂದ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಸಭಾ ವೇದಿಕೆಯಲ್ಲಿ ನಡೆಯುತ್ತಿದೆ.
ವಾಗ್ದೇವಿ ಸಂಗೀತ ಶಾಳೆಯ ವಿದ್ಯಾಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಬೆಳಿಗ್ಗೆ ಉದ್ಘಾಟನೆಗೊಂಡು ಸಂಗೀತೋತ್ಸವ ನಡೆಯುತ್ತಿದೆ. ವಯಲಿನ್‌ನಲ್ಲಿ ವಿಶ್ವಾಸ್ ಆಚಾರ್, ರಮೇಶ್ ರಾವ್, ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು, ಮೃದಂಗದಲ್ಲಿ ವೆಂಕಟ ಯಶಸ್ವಿ, ಕಬೆಕ್ಕೋಡು, ವಿದ್ವಾನ್ ಶ್ಯಾಮ್‌ಭಟ್ ಆರಂಬೂರು ಸಹಕರಿಸುತ್ತಿದ್ದಾರೆ.
ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇತಿ ನಡೆಯಲಿದ್ದು ಹಾಡುಗಾರಿಕೆಯಲ್ಲಿ ವಿದ್ವಾನ್ ಪಟ್ಟಾಭಿರಾಮ್ ಪಂಡಿತ್ ಬೆಂಗಳೂರು, ಮೃದಂಗ ವಿದ್ವಾನ್ ಕಾಂಚನ ಎ.ಈಶ್ವರ ಭಟ್ ಪುತ್ತೂರು ಮತ್ತಿತರರು ಸಹಕರಿಸಲಿದ್ದಾರೆ. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾಗ್ದೇವಿ ಸಂಗೀತ ಶಾಲೆಯ ಶಿಕ್ಷಕಿ ಸವಿತಾರವರು ತಿಳಿಸಿದ್ದಾರೆ.