ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ‘ಶ್ರೀ ಆಂಜನೇಯ ೫೬’ ಸಂಭ್ರಮ, ಬೆಳಿಗ್ಗೆ ೯.೩೦ರಿಂದ ಯಕ್ಷ ತಾಪಸಿಯರು-ಸಂವಾದ-ತಾಳಮದ್ದಳೆ, ಮಧ್ಯಾಹ್ನ ೨ರಿಂದ ಭೀಷ ಸೇನಾಧಿಪತ್ಯ-ಕರ್ಮಬಂಧ-ತಾಳಮದ್ದಳೆ, ಸಂಜೆ ೪.೩೦ರಿಂದ ಸಭಾಕಲಾಪ, ಯಕ್ಷಾಂಜನೇಯ ಪ್ರಶಸ್ತಿ ಪ್ರದಾನ, ಮಹಿಳಾ ಯಕ್ಷಗಾನ ಸಂಘದ ವಿಂಶತಿ ಗೌರವ ಸಮ್ಮಾನ
ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಸಂಜೆ ೫.೩೦ರಿಂದ ಬಂಧುತ್ವ ಕ್ರಿಸ್‌ಮಸ್-ಶಾಂತಿ ಸಂದೇಶ, ಸಾಂಸ್ಕೃತಿಕ ಸಂಜೆ
ಪುತ್ತೂರು, ಮರೀಲ್, ಬನ್ನೂರು ಕ್ರೈಸ್ರ ಹಬ್ಬಗಳ ಆಚರಣಾ ಸಮಿತಿಯಿಂದ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸಂಜೆ ದರ್ಬೆ ಫಾ.ಪ್ರತಾವೋ ಸರ್ಕಲ್ ಬಳಿಯಿಂದ ಪುತ್ತೂರು ಮುಖ್ಯರಸ್ತೆಯ ಗಾಂಧಿಕಟ್ಟೆಯವರೆಗೆ ಮೆರವಣಿಗೆ
ಮಂಜಲ್ಪಡ್ಪು ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಪುತ್ತೂರು ತುಳುಕೂಟದ ವತಿಯಿಂದ ಬೆಳಿಗ್ಗೆ ೧೦.೩೦ರಿಂದ ಪುತ್ತೂರು ತಾಲೂಕು ತುಳುವರ ಸಮ್ಮೇಳನದ ಪೂರ್ವಭಾವಿ ಸಭೆ
ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಬೆಳಿಗ್ಗೆ ೯ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಬೆಳಿಗ್ಗೆ ೧೧ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರಗಳ ಪರಿಶೀಲನೆ
ಬಲ್ಯ ಸೌಪರ್ಣಿಕಾ ಕೊಲ್ಲಿಮಾರು ತರವಾಡು ಮನೆಯಲ್ಲಿ ಬೆಳಿಗ್ಗೆ ೭ರಿಂದ ಬಲ್ಯ ಗ್ರಾಮದ ನಿವಾಸಿ ಭಾರತೀಯ ಜೀವವಿಮಾ ನಿಗಮದ ಬಂಟ್ವಾಳ ಶಾಖೆಯ ಅಭಿವೃದ್ಧಿ ಅಧಿಕಾರಿ ನಾರಾಯಣ ಎನ್. ಕೊಲ್ಲಿಮಾರ್‌ರವರ ಎಲ್‌ಐಸಿ ವೃತ್ತಿ ಬದುಕಿನ ಬೆಳ್ಳಿ ಹಬ್ಬದ ರಜತ ಸಂಭ್ರಮೋತ್ಸವ
ಕಂಬಳಬೆಟ್ಟು ಧರ್ಮನಗರ ಮಲರಾಯ ಜೇರ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಮಲರಾಯ ದೈವದ ನೇಮೋತ್ಸವ, ರಾತ್ರಿ ೮ಕ್ಕೆ ಕೊರತ್ತಿ, ಗುಳಿಗ ದೈವಗಳ ನೇಮೋತ್ಸವ
ಮುರ ಬನಾರಿ ಸತ್ಯಶಾಂತ ಶ್ರೀನಿವಾಸದಲ್ಲಿ ಸತ್ಯಶಾಂತ ಪ್ರತಿಷ್ಠಾನದಿಂದ ಬೆಳಿಗ್ಗೆ ೮.೩೦ರಿಂದ ರಾಜ್ಯಮಟ್ಟದ ಕಿರುಕಥಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಸಾಹಿತ್ಯ ಸಾಂಸ್ಕೃತಿಕ, ಗಾನ ಲಹರಿ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ
ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ ಭಜನಾ ಮಂಗಳೋತ್ಸವ, ಹಿರಿಯ ಭಜಕರಿಗೆ ಗೌರವಾರ್ಪಣೆ, ಭಜಕರಿಗೆ, ಬೈಲುವಾರು ಸಂಚಾಲಕರಿಗೆ ಗೌರವಾರ್ಪಣೆ, ಭಜನಾ ಸಂಕೀರ್ತನೆ, ಸಾಂಸ್ಕೃತಿಕ ವೈಭವ, ಅನ್ನಸಂತರ್ಪಣೆ
ಹಿರೇಬಂಡಾಡಿ ಸಾಂತಿತ್ತಡ್ಡ ಕುಟುಂಬದ ಮನೆಯಲ್ಲಿ ಬೆಳಿಗ್ಗೆ ಗಣಹೋಮ, ಮುಡಿಪು ಶುದ್ಧ, ನಾಗತಂಬಿಲ, ಸಂಜೆ ೬ರಿಂದ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ೮ಕ್ಕೆ ದೈವಗಳ ಭಂಡಾರ ತೆಗೆಯುವುದು, ೯ಕ್ಕೆ ಅನ್ನಸಂತರ್ಪಣೆ, ದೈವಗಳ ನೇಮೋತ್ಸವ
ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಬೆಳಿಗ್ಗೆ ೯.೩೦ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ
ಶುಭಾರಂಭ
ಕಾಣಿಯೂರು ಮುಖ್ಯರಸ್ತೆ, ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ೧೦ಕ್ಕೆ ಪ್ರಶಾಂತ್ ಬಾರ್ & ರೆಸ್ಟೋರೆಂಟ್ ಸ್ಥಳಾಂತರಗೊಂಡು ಶುಭಾರಂಭ
ಟಿಹೊಸಮಠ ಕಡಬದಲ್ಲಿ ಬೆಳಿಗ್ಗೆ ೭ಕ್ಕೆ ನಾಗತಂಬಿಲ, ಗಣಹೋಮ, ೧೧ಕ್ಕೆ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಆಡಳಿತ ಕಛೇರಿ ಉದ್ಘಾಟನೆ, ಸಭಾ ಕಾರ್ಯಕ್ರಮ, ಸಮುದಾಯದ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ, ಸಂಜೆ ೫.೩೦ಕ್ಕೆ ಸಮಾರೋಪ
ಶುಭವಿವಾಹ
ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಬೊಳ್ಳಾಡಿ ವಸಂತಿ ಮತ್ತು ರಾಮಯ್ಯ ಗೌಡರ ಪುತ್ರ ತುಷಾರ್ (ಅಭಿ) ಹಾಗೂ ಬಂಟ್ವಾಳ ತಾಲೂಕು ಕೊಲ್ನಾಡು ಗ್ರಾಮದ ಬೇಬಿ ಮತ್ತು ಪುರುಷೋತ್ತಮ ಗೌಡರ ಪುತ್ರಿ ಅರ್ಪಿತಾರವರ ವಿವಾಹ
ಕಡಬ ತಾಲೂಕು ಏನೆಕಲ್ಲು ರೋಯಲ್ ಮೊಂಟನ ರೆಸಾರ್ಟ್‌ನಲ್ಲಿ ಕಡಬ ಗ್ರಾಮದ ಗ್ರೀನ್ ಪಾರ್ಕ್ ಪಣೆಮಜಲು ಭವಾನಿ ಮತ್ತು ಗಣೇಶ್ ಪಿ. ರವರ ಪುತ್ರಿ ಡಾ| ಪ್ರತ್ಯೂಷ ಪಿ.ಜಿ ಹಾಗೂ ಕುಂದಾಪುರ ತಾಲೂಕು ಬಸ್ರೂರು ಅರ್ಯ ವೈದ್ಯ ಶಾಲಾ ಆಶಾ ಮತ್ತು ಡಾ| ಭರತ್‌ಕುಮಾರ್‌ರವರ ಪುತ್ರ ಅಕ್ಷಯ್ ಕುಮಾರ್‌ರವರ ವಿವಾಹ
ಮಡಿಕೇರಿ ಕೊಡವ ಸಮಾಜದಲ್ಲಿ ಕಡಬ ತಾಲೂಕು ದೋಳ್ಪಾಡಿ ಗ್ರಾಮದ ಮರಕ್ಕಡ ಸುಮಿತ್ರ ಮತ್ತು ಶೀಧರ ಗೌಡರ ಪುತ್ರಿ ದೀಕ್ಷಾ ಮತ್ತು ಮಡಿಕೇರಿ ತಾಲೂಕು ಭಾಗಮಂಡಲ ತಾವೂರು ಗ್ರಾಮದ ಅಮೆಮನೆ ವಿಮಲ ಮತ್ತು ವಿಜಯ ಕುಮಾರ್‌ರವರ ಪುತ್ರ ಸುಹಾನ್‌ರವರ ವಿವಾಹ
ಬ್ರಹ್ಮೋಪದೇಶ
ಪುತ್ತೂರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬನ್ನೂರು ಗಣೇಶ್ ಆಚಾರ್ಯರ ಪುತ್ರ ಅದ್ವಿತ್‌ರವರ ಬ್ರಹ್ಮೋಪದೇಶ
ಬನ್ನೂರು ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ಹವ್ಯಕ ಸಭಾ ಭವನದಲ್ಲಿ ಪುತ್ತೂರು ಅನಂತ ನಾರಾಯಣ ಕೆ. ರವರ ಪುತ್ರ ಸ್ಕಂದ ಕೃಷ್ಣರವರ ಉಪನಯನ
ಧನುಪೂಜೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠ, ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪೆರ್ಲಂಪಾಡಿ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನ, ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮುಂಡೂರು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಡಿಪ್ಪಾಡಿ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನ, ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ, ಹನುಮಗಿರಿ ಪಂಚಮುಖಿ ಆಂಜನೇಯ ದೇವಸ್ಥಾನ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಖಂಡಿಗ ನೀರ್ಕಜೆ ಶ್ರೀ ಕೈಲಾಸೇಶ್ವರ-ಅಯ್ಯಪ್ಪ ಸ್ವಾಮಿ ದೇವ ಸನ್ನಿದಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ೩೪ನೆಕ್ಕಿಲಾಡಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕಡಬ ಪಿಜಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನ, ಪೆರ್ಲ ಕಾಂಚನ ಶ್ರೀ ಷಣ್ಮುಖ ದೇವಸ್ಥಾನ, ಇರ್ದೆ ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನ, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬೆಳಿಗ್ಗೆ ಧನುಪೂಜೆ