ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: 7 ದಿನಗಳ ಶೋಕಾಚರಣೆ ಹಿನ್ನೆಲೆ ಪೂರ್ವ ನಿಗದಿಯಾದ ಕಾರ್ಯಕ್ರಮಗಳನ್ನು ಮಾಡಬಹುದೇ? ಅಥವಾ ಮುಂದೂಡಬೇಕೇ? ಗೊಂದಲದಲ್ಲಿ ಆಯೋಜಕರು

0

ಪುತ್ತೂರು: ಮಾಜಿ ಪ್ರಧಾನಿ ಡಾಕ್ಟರ್ ಮನಮೋಹನ್ ಸಿಂಗ್ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಸರಕಾರ 7 ದಿನಗಳ ಶೋಕಾಚರಣೆ ಘೋಷಿಸಿದ್ದು, ಎಲ್ಲಾ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ಸರಕಾರ ರದ್ದುಗೊಳಿಸಿದೆ.

ತಾಲೂಕಿನ ವಿಧ ಕಡೆಗಳಲ್ಲಿ ಶಾಲಾ ವಾರ್ಷಿಕ ಸಮಾರಂಭ ಮತ್ತು ಸಂಘ ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮ ಈಗಾಗಲೇ ನಿಗದಿಗೊಂಡಿದ್ದು, ಅಂತಹ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ಇದೆಯಾ ಅಥವಾ ಕಾರ್ಯಕ್ರಮ ಮುಂದೂಡಬೇಕಾ ಎನ್ನುವ ಗೊಂದಲ ಏರ್ಪಟ್ಟಿರುವುದಾಗಿ ತಿಳಿದು ಬಂದಿದೆ.


ಸಾಂಸ್ಕೃತಿಕ ಕಾರ್ಯಕ್ರಮ ಬಿಟ್ಟು ಉಳಿದ ಕಾರ್ಯಕ್ರಮಗಳು ನಡೆಸಬಹುದು ಎನ್ನಲಾಗುತ್ತಿದೆಯಾದರೂ ಅದಕ್ಕೆ ಸಂಬಂಧಪಟ್ಟವರಿಂದ ಸ್ಪಷ್ಟ ನಿರ್ದೇಶನ ಬಾರದ ಕಾರಣ ಕಾರ್ಯಕ್ರಮ ಆಯೋಜಕರು ಗೊಂದಲದಲ್ಲಿದ್ದಾರೆ ಎಂದು ತಿಳಿದು ಬಂದಿದೆ.


ಈಗಾಗಲೇ ಕೆಲವು ಕಡೆಗಳಲ್ಲಿ ಪೂರ್ವ ನಿರ್ಧರಿತವಾಗಿದ್ದ ಕಾರ್ಯಕ್ರಮಗಳನ್ನು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗೊಂದಲ ಪರಿಹರಿಸಬೇಕೆನ್ನುವ ಆಗ್ರಹ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here