ವಿಟ್ಲ: ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜ.3ರಿಂದ ಜ.5ರವರೆಗೆ ನಡೆಯಲಿರುವ ವರ್ಷಾಧಿ ಜಾತ್ರೋತ್ಸವದ ಪ್ರಯುಕ್ತ ಡಿ.27ರಂದು ಗೊನೆಮುಹೂರ್ತ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕರಾದ ಗೋವಿಂದ ಜೋಯಿಸರವರು ವಿಧಿವಿಧಾನ ನೆರವೇರಿಸಿದರು. ಅರ್ಚಕರಾದ ವೇ.ಮೂ. ಗೋಪಾಲಕೃಷ್ಣ ಭಟ್ ರವರು ಸಹಕರಿಸಿದರು.
ಕ್ಷೇತ್ರದ ಪದನಿಮಿತ್ತ ಆಡಳಿತಾಧಿಕಾರಿ ಹಾಗೂ ಇಡ್ಕಿದು ಗ್ರಾಮಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಪ್ರಮುಖರಾದ ಪಿ.ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಕ್ಷೇತ್ರದ ಉತ್ಸವ ಸಮಿತಿ ಪದಾಧಿಕಾರಿಗಳಾಗಿರುವ ಸುರೇಶ್ ಕೆ.ಎಸ್. ಮುಕ್ಕುಡ, ಪ್ರಕಾಶ್ ಕೆ.ಎಸ್.ಉರಿಮಜಲು, ರಮೇಶ್ ಭಟ್ ಎಂ.ಹೆಚ್. ಮಿತ್ತೂರು, ಡಿ.ತಿಮ್ಮಪ್ಪ ಸಪಲ್ಯ ದೇವಸ್ಯ, ಸುರೇಶ್ ಪೂಜಾರಿ ಸೂರ್ಯ, ಶಶಿಧರ ಭಂಡಾರಿ ಸೂರ್ಯ,ವಿಜಯಕುಮಾರ್ ಸೂರ್ಯ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಸುಧೀರ್ ಕುಮಾರ್, ಪ್ರಮುಖರಾದ ಪ್ರಪುಲ್ಲ ಚಂದ್ರ ಪಿ.ಜಿ., ಚಂದ್ರಶೇಖರ ಕಂಬಳಿ ಅರ್ಕೆಚ್ಚಾರು, ದೇಜಪ್ಪ ಕೋಲ್ಪೆ, ಕೆ.ವೆಂಕಟರಮಣ ಭಟ್ ಸೂರ್ಯ, ಈಶ್ವರ ಗೌಡ ನಾಯ್ತೋಟು, ವಿ.ಕೆ.ಕುಟ್ಟಿ ಉರಿಮಜಲು, ಜಗದೀಶ್ ದೇವಸ್ಯ, ರೋಹಿತ್ ನೇರ್ಲಾಜೆ, ಕೃಷ್ಣಪ್ಪ ಕೆಮನಾಜೆ, ಸುರೇಶ್ ದಾಸ್ ನೆರ್ಲಾಜೆ, ಉಮೇಶ್ ಮಡಿವಾಳ, ಕಿರಣ್ ಸಪಲ್ಯ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.