ಜ.10ರಿಂದ ಈಶ್ವರಮಂಗಲ ಮಖಾಂ ಉರೂಸ್ – 7 ದಿನದ ಧಾರ್ಮಿಕ ಉಪನ್ಯಾಸ

0

ಪುತ್ತೂರು: ಜಾತಿ ಮತ ಬೇಧವಿಲ್ಲದೆ ಸರ್ವರಿಂದಲೂ ಗೌರವಿಸಲ್ಪಡುವ ಹಲವಾರು ರೋಗಗಳಿಗೆ ಪರಿಹಾರವನ್ನು ಬಯಸಿ ಭಕ್ತ ಜನರು ಬರುತ್ತಿರುವ ಪುಣ್ಯ ಸ್ಥಳ ಈಶ್ವರಮಂಗಲ ಜುಮಾ ಮಸ್ಜಿದ್ ಅಂಗಣದಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ಬಹುಃ ವಲಿಯುಲ್ಲಾಇ ಮಶ್ಹೂರ್ (ರ.ಅ) ಅವರ ಹೆಸರಿನಲ್ಲಿ ಆಚರಿಸಿಕೊಂಡು ಬರುವ ಮಖಾಂ ಈಶ್ವರಮಂಗಲ ಮುಖಾಂ ಉರೂಸ್ ಮತ್ತು 7 ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಜ.10 ರಿಂದ 16ರ ತನಕ ಈಶ್ವರಮಂಗಲ ಯಾಸೀನ್ ಮುತ್ತು ತಂಙಳ್ ನಗರದಲ್ಲಿ ಜರುಗಲಿದೆ ಎಂದು ಉರೂಸ್ ಸಮಿತಿ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮತ್ತು ಜಮಾಅತ್ ಕಮಿಟಿಯ ಮಾಜಿ ಅಧ್ಯಕ್ಷ ಅಬ್ದುಲ್ ಸಲಾಂ ಹಾಜಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಅಬ್ದುಲ್‌ಸಲಾಂ ಹಾಜಿ ಅವರು ಮಾತನಾಡಿ, ಜ.10ರಂದು ಬೆಳಿಗ್ಗೆ ಈಶ್ವರಮಂಗಲ ಎಂ.ಜೆ.ಎಂ ಖತೀಬ ಅಸ್ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಅವರು ಧ್ವಜಾರೋಹಣ ಮಾಡಲಿದ್ದಾರೆ. ರಾಮಂದಳಿ ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ಅವರು ಧಾರ್ಮಿಕ ಮತ ಪ್ರವಚನ ಉದ್ಘಾಟಿಸಲಿದ್ದಾರೆ. ಈಶ್ವರಮಂಗಲ ಎಮ್.ಜೆ.ಎಂ ಖತೀಬ ಅಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜ.11ರಂದು ರಾತ್ರಿ ಇಬ್ರಾಹಿಂ ಸಖಾಫಿ ತಾತೂರ್, ಜ.12ರಂದು ಇಸ್ಕೇ ಮದೀನಾ ಮಜ್ಲಿಸ್ ಕಾರ್ಯಕ್ರಮವನ್ನು ಅನ್ವರ್ ಅಲಿ ಹುದವಿ ಮಲಪ್ಪುರಂ ನಡೆಸಿಕೊಡಲಿದ್ದಾರೆ. ಜ.13ರಂದು ರಾತ್ರಿ ನವಾಝ್ ಮನ್ನಾನಿ ಪನವೂರ್ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ.14ರಂದು ಪೇರೋಡ್ ಮುಹಮ್ಮದ್ ಅಝ್‌ಹರಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜ.15ರಂದು ರಾತ್ರಿ ಬಹು| ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಳ್ ಅವರು ದುಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭ ಡಾ. ಹಾಫಿಳ್ ಜುನೈದ್ ಜೌಹರಿ ಅಲ್ ಅಝ್‌ಹರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ.16ರಂದು ಸಮಾರೋಪ ಸಮಾರಂಭವು ರಾತ್ರಿ ನಡೆಯಲಿದ್ದು, ಸಮಾರೋಪ ಸಮಾರಂಭವನ್ನು ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಉದ್ಘಾಟಿಸಲಿದ್ದಾರೆ. ಈಶ್ವರಮಂಗಲ ಎಂ.ಜೆ.ಎಂನ ಖತೀಬರಾದ ಬಹು| ಅಸ್ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಅವರು ದುಆಶೀರ್ವಚನ ನೀಡಲಿದ್ದಾರೆ. ಬಳಿಕ ಶಫೀಖ್ ಬದ್‌ರಿ ಅಲ್ ಬಾಖವಿ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಉರೂಸ್ ಸಮಾರೋಪದ ದಿನದಂದು ಅನ್ನದಾನ ನಡೆಯಲಿದೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಏರ್ಪಡಿಸಲಾಗಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸಮಿತಿ ಕೋಶಾಧಿಕಾರಿ ಇ.ವಿ ಮುಹಮ್ಮದ್ ಕುಂಞಿ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಮಿನಿ, ಜಮಾಅತ್ ಕಮಿಟಿ ಕಾರ್ಯದರ್ಶಿ ಇ.ಎಚ್ ಖಾದರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here