ಪುತ್ತೂರು: ಬುಸ್ತಾನುಲ್ ಬಾದುಷಾ ಮಜ್ಲಿಸ್ ಹಾಗೂ ಜಲಾಲಿಯ್ಯಾ ರಾತೀಬ್ ಸಮಿತಿ ಕೆಮ್ಮಾಯಿ ಇದರ ಜಂಟಿ ಆಶ್ರಯದಲ್ಲಿ 3ನೇ ವರ್ಷದ ಜಲಾಲಿಯ್ಯ ರಾತೀಬ್ ವಾರ್ಷಿಕೋತ್ಸವ ಮತ್ತು ಎರಡು ದಿನದ ಮತಪ್ರವಚನವು ಕೆಮ್ಮಾಯಿ ತಂಙಳ್ ನಿವಾಸದಲ್ಲಿ ಜ.10 ರಿಂದ 12ರ ತನಕ ನಡೆಯಲಿದೆ ಎಂದು ಜಲಾಲಿಯ್ಯಾ ರಾತೀಬ್ ಸಮಿತಿ ಪ್ರಧಾನ ಕಾರ್ಯದರ್ಶಿ ಇಸಾಕ್ ಸಾಲ್ಮರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಹಾಜಿ ಸಯ್ಯದ್ ಅಬೂಬಕ್ಕರ್ ಅಲ್ಹಾದಿ ತಂಙಳ್ ಕೆಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಜ.10ರಂದು ಅಲ್ಹಾಜಿ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರು ದುವಾಃ ನೆರವೇರಿಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಎಂ.ಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಲ್ಮರ ಸಯ್ಯದ್ಮಲೆ ಖತೀಬರಾದ ಬಹು | ಉಮರ್ ದಾರಿಮಿ ಸಾಲ್ಮರ ಅವರು ಉದ್ಘಾಟಿಸಲಿದ್ದಾರೆ.
ಕಾಸರಗೋಡು ಜಾಮಿಅ ಸಅದಿಯ ಪ್ರೊ. ಕೆ.ಪಿ ಹುಸೈನ್ ಸಅದಿ ಕೆ.ಸಿ.ರೋಡ್ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ.11ಕ್ಕೆ ಅಲ್ಹಾಜಿ ಸಯ್ಯದ್ ಹಾಮಿದುಲ್ ಹಾದಿ ತಂಙಳ್ ಮಂಜೇಶ್ವರ ದುವಾಃ ನೆರವೇರಿಸಲಿದ್ದಾರೆ. ಬಿಬಿಎಮ್ ಕೆಮ್ಮಾಯಿ ಇದರ ಅಧ್ಯಕ್ಷ ಮೂಸಾ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಪಡೀಲು ಜುಮಾ ಮಸೀದಿ ಖತೀಬ ಮುಹಮ್ಮದ್ ಹನೀಫ್ ದಾರಿಮಿ ಅವರು ಉದ್ಘಾಟಿಸಲಿದ್ದಾರೆ. ಹನೀಫ್ ನಿಝಾಮಿ ಅಲ್ ಮುರ್ಷಿದಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಜ.12ಕ್ಕೆ ಸಂಜೆ ಸಾಲ್ಮರ ಸಯ್ಯದ್ ಮಲೆಯಲ್ಲಿ ಮಖಾಂ ಝಿಯಾರತ್, ಸಂಜೆ ಗಂಟೆ 5ಕ್ಕೆ ಅಜ್ಮೀರ್ ಮೌಲೂದ್ ನಡೆಯಲಿದೆ. ಬಳಿಕ ಸಾರ್ವಜನಿಕ ಸಭೆ ನಡೆಯಲಿದೆ. ಸಾಲ್ಮರ ಅಲ್ಹಾಜಿ ಸಯ್ಯಿದ್ ಮುಹಮ್ಮದ್ ಹಾದಿ ತಂಙಳ್ ದುವಾಃ ನೆರವೇರಿಸಲಿದ್ದಾರೆ. ಕೆಮ್ಮಾಯಿ ಅಲ್ಹಾಜಿ ಸಯ್ಯಿದ್ ಅಬೂಬಕ್ಕರ್ ಹಾದಿ ತಂಙಳ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೆಮ್ಮಾಯಿ ಬಿಜೆಎಂ ಮುದರ್ರಿಸ್ ಬಹು| ಮುಈನುದ್ದೀನ್ ಮದನಿ ಅಲ್ ಹುಮ್ಮೆದಿ ಪುಣಚ ಅವರು ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮೊಹಮ್ಮದ್, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಸಹಿತ ಹಲವಾರು ಮಂದಿ ಗಣ್ಯರು ಆಗಮಿಸಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೊಳುವಾರು, ಪ್ರಧಾನ ಕಾರ್ಯದರ್ಶಿ ಯೂಸೂಪ್ ತಾರಿಗುಡ್ಡೆ, ಸದಸ್ಯರಾದ ಅದಂ ಕೆಮ್ಮಾಯಿ, ನೌಫಲ್ ಕೆಮ್ಮಾಯಿ ಉಪಸ್ಥಿತರಿದ್ದರು.