ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ‘ಅಗ್ನಿಶಾಮಕ ದಳದಿಂದ ಅಗ್ನಿ ಮತ್ತು ಸುರಕ್ಷತೆ ಪ್ರಾತ್ಯಕ್ಷಿತೆ’ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜನವರಿ 09 ರಂದು ಅಗ್ನಿಶಾಮಕ ದಳದವರಿಂದ ‘ಅಗ್ನಿ ಮತ್ತು ಸುರಕ್ಷತೆಯ ಪ್ರಾತ್ಯಕ್ಷಿತೆ’ ಕಾರ್ಯಕ್ರಮ ನಡೆಯಿತು.

ಠಾಣಾಧಿಕಾರಿ ಕರುಣಾಕರ ಇವರ ನೇತೃತ್ವದಲ್ಲಿ, ಬೆಂಕಿಯ ವಿಧಗಳು, ಬೆಂಕಿಯನ್ನು ಆರಿಸುವ ರೀತಿ ಮತ್ತು ಮನೆಯಲ್ಲಿ ಗ್ಯಾಸ್ ಸೋರಿಕೆಯಾದಾಗ ಅನುಸರಿಸಬೇಕಾದ ಎಚ್ಚರಿಕೆಗಳನ್ನು ಪ್ರಾಯೋಗಿಕವಾಗಿ ತೋರಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸಿಂಧು ವಿ. ಜಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿಯಾದ ಗೈಡ್ಸ್ ಕ್ಯಾಪ್ಟನ್ ಪ್ರಫುಲ್ಲ. ಕೆ ಹಾಗೂ ಸ್ಕೌಟ್ಸ್ ಮಾಸ್ಟರ್ ರಮೇಶ್ ಕೆ.ಪಿ. ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here