ಆಯುಧ ಪೂಜಾ ಸೇವಾ ಸಮಿತಿ ವತಿಯಿಂದ ಸುಳ್ಯಪದವು ಪೇಟೆಯಲ್ಲಿ ನೂತನ ಸಿಸಿ ಕ್ಯಾಮರಾ ಲೋಕಾರ್ಪಣೆ 

0

ಬಡಗನ್ನೂರು: ಸುಳ್ಯಪದವು ಆಯುಧಪೂಜಾ ಸೇವಾ ಸಮಿತಿ ವತಿಯಿಂದ ಸುಳ್ಯಪದವಿನ ಪೇಟೆಯಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಅಳವಡಿಸಿದ ನೂತನ ಸಿ.ಸಿ ಕ್ಯಾಮರಾದ ಲೋಕರ್ಪಣಾ ಕಾರ್ಯಕ್ರಮ ಜ.10ರಂದು ಸುಳ್ಯಪದವು ಪೇಟೆಯಲ್ಲಿ ನಡೆಯಿತು.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ಇವರು ಸಾರ್ವಜನಿಕ ಉಪಯೋಗಕ್ಕಾಗಿ ಅಳವಡಿಸಿದ ನೂತನ ಸಿ.ಸಿ ಕ್ಯಾಮರಾದ ಲೋಕಾರ್ಪಣೆಗೊಳಿಸಿ ಮಾತನಾಡಿ, ಕೇರಳ ಕರ್ನಾಟಕ ಗಡಿ ಪ್ರದೇಶವಾದ ಸುಳ್ಯ ಪದವಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದು ಅಪರಾಧಗಳನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ. ಸಿಸಿ ಕ್ಯಾಮರಾದ ನಿರ್ವಹಣೆ ಕಾರ್ಯ ಕೂಡ ಆಗಬೇಕು. ಸುಳ್ಯಪದವು ಆಯುಧ ಪೂಜಾ ಸಮಿತಿಗೆ ಪೊಲೀಸ್ ಇಲಾಖೆಯಿಂದ ಅಭಿನಂದನೆಗಳು ಎಂದು ಹೇಳಿದರು.

ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ಅಧ್ಯಕ್ಷರಾದ ಗಿರೀಶ್ ಕುಮಾರ್ ಕನ್ನಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಯುಧ ಪೂಜಾ ಸೇವಾ ಸಮಿತಿ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಸಮಿತಿಗೆ 25 ತುಂಬಿದ ಸಂದರ್ಭದಲ್ಲಿ ಬೆಳ್ಳಿ ಸಂಭ್ರಮ ಮಾಡುವ ಕನಸು ನಮ್ಮಲ್ಲಿತ್ತು ಅದರೆ ಕೊರೋನಾ ಮಹಾಮಾರಿ ಅಡ್ಡಿ ಉಂಟುಮಾಡಿತು. ಇದರ ನೆನಪಿಗೋಸ್ಕರ ಕೊರೋನಾ ಸಂದರ್ಭದಲ್ಲಿ ಸುಮಾರು 3ಲಕ್ಷ ರೂ. ಆಹಾರದ ಕಿಟ್ ಬಡ ಕುಟುಂಬಕ್ಕೆ ವಿತರಣೆ ಮಾಡಲಾಗಿದೆ. 30ನೇ ವರ್ಷದ ಅಂಗವಾಗಿ ಸಿಸಿ ಕ್ಯಾಮರಾವನ್ನು ಸುಳ್ಯಪದವು ಪೇಟೆಯಲ್ಲಿ ಅಳವಡಿಸಲಾಗಿದೆ. ಇದರಿಂದ ಅಪರಾಧ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಸಿಸಿ ಕ್ಯಾಮರಾದ ನಿರ್ವಹಣೆಯೂ ಕೂಡ ಆಯುಧ ಪೂಜಾ ಸೇವಾ ಸಮಿತಿ ಮಾಡಲಿದೆ ಎಂದು ಹೇಳಿದರು.

ಬಡಗನ್ನೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಪುಷ್ಪಲತಾ ದೇವಕಜೆ ಮಾತನಾಡಿ, ಆಯುಧ ಪೂಜಾ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು. ಪಂಚಾಯತ್ ಸದಸ್ಯರಾದ ವೆಂಕಟೇಶ್ ಕನ್ನಡ್ಕ, ಆಯುಧ ಪೂಜಾ ಸೇವಾ ಸಮಿತಿಯ ಉಪಾಧ್ಯಕ್ಷ ಉದಯಕುಮಾರ್ ಕನ್ನಡ್ಕ, ಈಶ್ವರಮಂಗಳ ಪೊಲೀಸ್ ಹೊರಠಾಣೆಯ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ, ಸುಳ್ಯ ಪದವು ಬೀಟ್ ಪೊಲೀಸ್ ಬಸವರಾಜು ಉಪಸ್ಥಿತರಿದ್ದರು.

ಆಯುಧ ಪೂಜಾ ಸೇವಾ ಸಮಿತಿಯ ಪ್ರಕಾಶ್ ಮರದಮೂಲೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರಿರಾಜ್ ಭಂಡಾರಿ ವಂದಿಸಿದರು. ಶಿಕ್ಷಕ ರಾಜೇಶ್ ಎಂ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here