ಕುಂಬ್ರ: ಎಸ್.ಕೆ.ಎಸ್.ಎಸ್.ಎಫ್ ದ.ಕ. ಈಸ್ಟ್ ಜಿಲ್ಲೆ ಇದರ ಆಶ್ರಯದಲ್ಲಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ ಕುಂಬ್ರ ಜಂಕ್ಷನ್ ನಲ್ಲಿ ನಡೆಯುವ ಮಾನವ ಸರಪಳಿ ಕಾರ್ಯಕ್ರಮದ ಸ್ವಾಗತ ಕಛೇರಿ ಉಧ್ಘಾಟನೆಯು ಕುಂಬ್ರ ಫ್ಯಾಮಿಲಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಮಾನವ ಸರಪಳಿ ಸ್ವಾಗತ ಸಮಿತಿ ಚೇರ್ಮನ್ ಮಹಮ್ಮದ್ ಕೆ.ಎಚ್. ಈಶ್ವರಮಂಗಲ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ವೀನರ್ ಹಾರಿಸ್ ಕೌಸರಿ ಕೋಲ್ಪೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಕಛೇರಿಯನ್ನು ರಾಜ್ಯಾಧ್ಯಕ್ಷರಾದ ರಫೀಕ್ ಹುದವಿ ಕೋಲಾರಿ ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ಮಹಮ್ಮದ್ ನವವಿ ಉದ್ಘಾಟಿಸಿದರು.
ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ರಫೀಕ್ ಹುದವಿ ಕೋಲಾರಿ, ರಾಜ್ಯ ಕಾರ್ಯದರ್ಶಿ ಮೌಲಾನಾ ಅನೀಸ್ ಕೌಸರಿ, ಪಾಳ್ಯತ್ತಡ್ಕ ಖತೀಬರಾದ ನಝೀರ್ ಅಝ್ಹರಿ ಬೊಳ್ಮಿನಾರ್, ರಶೀದ್ ರಹ್ಮಾನಿ, ಸ್ವಾಗತ ಸಮಿತಿ ಚೇರ್ಮನ್ ಮಹಮ್ಮದ್ ಕೆ.ಎಚ್., ರಾಜ್ಯ ನಾಯಕ ಉಮರ್ ದಾರಿಮಿ ಸಾಲ್ಮರ ಶುಭ ಹಾರೈಸಿ ಮಾತನಾಡಿದರು. ರಾಜ್ಯ ನಾಯಕ ಇಸ್ಮಾಯಿಲ್ ತಂಙಳ್ , ಕುಂಬ್ರ ವಲಯ ಅಧ್ಯಕ್ಷರಾದ ಮನ್ಸೂರ್ ಅಸ್ಲಮಿ ಅಮ್ಚಿನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪುತ್ತೂರು ವಲಯ ಅಧ್ಯಕ್ಷ ಬಾತಿಷಾ ಹಾಜಿ, ಜಿಲ್ಲಾ ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ, ಅಶ್ರಫ್ ಮುಕ್ವೆ, ಜಿಲ್ಲಾ ವಿಖಾಯ ನಾಯಕ ಇಬ್ರಾಹಿಂ ಕಡವ, ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಸತ್ತಾರ್ ಕೌಸರಿ , ಕೆ.ಐ.ಸಿ. ಗಲ್ಫ್ ಪ್ರತಿನಿಧಿ ನೂರ್ ಮಹಮ್ಮದ್ ನೀರ್ಕಜೆ , ಆರ್ಥಿಕ ಸಮಿತಿ ಚೇರ್ಮನ್ ಅಬ್ದುಲ್ ಸಲಾಂ. ಎಂ.ಎ, ಮೀಡಿಯಾ ವಿಂಗ್ ಚೇರ್ಮನ್ ಝಕರಿಯಾ ಮುಸ್ಲಿಯಾರ್, ಕನ್ವೀನರ್ ಗಳಾದ ಲತೀಫ್ ಕೊರಿಂಗಿಲ, ಅಶ್ರಫ್ ರಹ್ಮಾನಿ ವೀರಮಂಗಲ, ವಲಯ ಉಪಾದ್ಯಕ್ಷರಾದ ಝೈನುದ್ದೀನ್ ಹಾಜಿ , ವಲಯ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ, ವಿಖಾಯ ಚೇರ್ಮನ್ ಶಕೀಲ್ ಅಹ್ಮದ್ ಬೇರಿಕೆ, ವಲಯ ನಾಯಕರಾದ ಬಶೀರ್ ಘಟ್ಟಮನೆ, ಬಶೀರ್ ಕೌಡಿಚ್ಚಾರು, ಅಶ್ರಫ್ ಮಾಡಾವು, ಹಾರಿಸ್ ಬೋಳೋಡಿ, ಕೆ.ಐ.ಸಿ. ಸಂಸ್ಥೆಯ ಮಹಮ್ಮದ್ ತೌಸೀಫ್ ಕೆದಂಬಾಡಿ , ಮಹಮ್ಮದ್ ಸಾಬಿತ್ ಉಪಸ್ಥಿತರಿದ್ದರು. ಯಾಸಿರ್ ಅರಾಫತ್ ಕೌಸರಿ ವಂದಿಸಿದರು