ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಜ.12 ರಿಂದ ಮೊದಲ್ಗೊಂಡು ಜ. 14.ರವರೆಗೆ ಶ್ರೀ ದೇವಳದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಜ..12 ರಂದು ಬೆಳಗ್ಗೆ ಗಂ 9 ರಿಂದ ಬಲಿವಾಡು ಶೇಖರಣೆ, ಹಸಿರುವಾಣಿ ಹೊರೆಕಾಣಿಕೆ ಸಂಗ್ರಹ, ಸಂಜೆ ಗಂ 6 ರಿಂದ ಉಗ್ರಾಣ ತುಂಬಿಸುವುದು, ರಾತ್ರಿ ಗಂ 8 ರಿಂದ ಮಹಾಪೂಜೆ, ಮಹಾ ಗಣಪತಿ ಪೂಜೆ, ಅತ್ತಾಳ ಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ ಬಳಿಕ ಅನ್ನಪ್ರಸಾದ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂ 7 ರಿಂದ ವಿದುಷಿ ಸುಜಾತ ಸುಧೀರ್ – ನಾಟ್ಯಶಿವ ನೃತ್ಯಶಾಲೆ ಕಾಸರಗೋಡು ಇವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.
ಜ. 13 ರಂದು ಪ್ರಾತಃಕಾಲ 6.30ಕ್ಕೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನದೊಂದಿಗೆ, ದೇವರಿಗೆ ಸ್ವರ್ಣಗಿಂಡಿ, ಸ್ವರ್ಣಾಭರಣಗಳನ್ನು ಅರ್ಪಿಸುವುದು, ದ್ವಾರಪಾಲಕರಾದ ಜಯ-ವಿಜಯರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಅಶ್ವತ್ಥಕಟ್ಟೆಯ ಲೋಕಾರ್ಪಣೆ, ನಡೆದು ಬೆಳಗ್ಗೆ ಗಂ 7 ಕ್ಕೆ ಶ್ರೀ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ, ವಾದ್ಯಮೇಳದೊಂದಿಗೆ ಹೊರಟು, ತೀರ್ಥ ತರುವುದು, 8 ರಿಂದ ಮಹಾಗಣಪತಿ ಹವನ, ನವಕಾಭಿಷೇಕ, ಮಧ್ಯಾಹ್ನ ಗಂ 12.00ರಿಂದ ತುಲಾಭಾರ ಸೇವೆ, ಮಹಾಪೂಜೆ, ಪಲ್ಲಪೂಜೆ, ಬಲಿಹೊರಡುವುದು, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಬೆಳಗ್ಗೆ ಗಂ 8. ರಿಂದ ಸರ್ವಶಕ್ತಿ ಮಹಿಳಾ ಭಜನಾ ತಂಡ ಪಡುಮಲೆ ಮತ್ತು ವರಮಹಾಲಕ್ಷ್ಮೀ ಮಹಿಳಾ ಭಜನಾ ತಂಡ ಪಡುಮಲೆ ಇವರಿಂದ ಭಜನಾ ಸಂಕೀರ್ತನೆ ,10 ರಿಂದ ತುಳು ಅಪ್ಪೆಕೂಟ ಪುತ್ತೂರು ಇವರಿಂದ ‘ತುಳುನಾಡ ಬಲಿಯೇಂದ್ರ’ ತುಳು ತಾಳಮದ್ದಲೆ, ಸಂಜೆ ಗಂ 06.00ರಿಂದ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಸೇವೆ ನಡೆಯಲಿದೆ.ರಾತ್ರಿ ಗಂ 7 ರಿಂದ ಶ್ರೀ ದೇವರ ಉತ್ಸವ ಬಲಿ, ಶ್ರೀ ಭೂತಬಲಿ, ನೃತ್ಯಬಲಿ, ಕಟ್ಟೆಪೂಜೆ ನಡೆಯಲಿದ್ದು, ಬಳಿಕ ಸುಡುಮದ್ದು ಪ್ರದರ್ಶನ, ಅನ್ನಸಂತರ್ಪಣೆ ನಡೆಯಲಿರುವುದು.
ಜ 14 ರಂದು ಬೆಳಗ್ಗೆ ಗಂ 9 ರಿಂದ ಶ್ರೀ ದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ವಿಷ್ಣುಸಹಸ್ರನಾಮ ಪಠಣ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಪ್ರಸಾದ ನಡೆಯಲಿದೆ.ರಾತ್ರಿ ಗಂ 8 ರಿಂದ ಶ್ರೀ ದೇವರಿಗೆ ರಂಗಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂ 10 ರಿಂದ ಸ್ಪರ್ಶ ಕಲಾ ತಂಡ ಸುರತ್ಕಲ್ ಇವರಿಂದ ‘ನಿರೆಲ್’ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.