ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್:  ವಿವೇಕಾನಂದ ಶಿಕ್ಷಕ ವೆಂಕಟೇಶ್ ರವರಿಗೆ 4, 5 ನೇ ಸ್ಥಾನ

0

ಪುತ್ತೂರು: ದಕ್ಷಿಣ ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಜನವರಿ 10ರಿಂದ 12ರವರೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ‍ಂಸ್ಕೃತ ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ಇವರು 45ರ ವಯೋಮಾನದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, 400 ಮೀ ಹರ್ಡಲ್ಸ್ ಮತ್ತು ಹೈಜಂಪ್ ನಲ್ಲಿ 4ನೇ ಸ್ಥಾನ ಹಾಗೂ 110 ಮೀ ಹರ್ಡಲ್ಸ್ ನಲ್ಲಿ 5ನೇ ಸ್ಥಾನ ಗಳಿಸಿರುತ್ತಾರೆ.

ಈ ಕ್ರೀಡಾಕೂಟದಲ್ಲಿ ಭಾರತ ಮಾತ್ರವಲ್ಲದೇ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಭೂತಾನ್ ದೇಶಗಳ ವಿವಿಧ ವಯೋಮಾನಗಳ  1700ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿದ್ದರು.

LEAVE A REPLY

Please enter your comment!
Please enter your name here