ಇಚ್ಲಂಪಾಡಿ ಹಾ.ಉ.ಸಹಕಾರ ಸಂಘದಿಂದ ಅಭಿಯಾನ

0


ನೆಲ್ಯಾಡಿ: ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಅಭಿಯಾನ ನಡೆಸಲಾಯಿತು.


ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಅವರು, ಹೈನುಗಾರಿಕೆಗೆ ಒಕ್ಕೂಟದಿಂದ ಸಿಗುವ ಸವಲತ್ತುಗಳು, ಹಸಿರು ಹುಲ್ಲು ಬಳಕೆಯ ಅಗತ್ಯತೆ, ಈರೋಡ್‌ನಿಂದ ದನ ಖರೀದಿ, ಬ್ಯಾಂಕ್‌ನಿಂದ ಹೈನುಗಾರಿಕೆ ಹಾಗೂ ಕೆ.ಸಿ.ಸಿ ಸಾಲದ ಬಗ್ಗೆ ಮಾಹಿತಿ ನೀಡಿದರು. ಸಂಘದ ವ್ಯಾಪ್ತಿಯಲ್ಲಿ ಗಿನಿಹುಲ್ಲು ಕುರಿತು ಪ್ರಾತ್ಯಕ್ಷಿಕೆ ನಡೆಸಿ ಮಾಹಿತಿ ನೀಡಲಾಯಿತು.


ಸಂಘದ ವ್ಯಾಪ್ತಿಯ 16ಜನ ಸದಸ್ಯರ ಮನೆ ಭೇಟಿ ಮಾಡಿ ಹೈನುಗಾರಿಕೆಯನ್ನು ಮತ್ತೆ ಪ್ರಾರಂಭಿಸಲು ಹಾಗೂ ಹೆಚ್ಚು ದನಗಳನ್ನು ಹೊರ ಜಿಲ್ಲೆಯಿಂದ ಖರೀದಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಇದರಲ್ಲಿ 6 ಮಂದಿ ಈರೋಡ್‌ನಿಂದ ದನ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದರು. ಅಭಿಯಾನದಲ್ಲಿ ಒಕ್ಕೂಟದ ವಿಸ್ತರಣಾಧಿಕಾರಿಗಳಾದ ರಾಜೇಶ್ ಕಾಮತ್, ಸುಚಿತ್ರ, ಸಂಘದ ಅಧ್ಯಕ್ಷ ಕೇಶವ ಅಲೆಕ್ಕಿ, ಕಾರ್ಯದರ್ಶಿ ಪ್ರವೀಣ್, ಕೃ.ಗ.ಕಾರ್ಯಕರ್ತ, ಸಂಘದ ಮೂವರು ನಿರ್ದೇಶಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here