





ಪುತ್ತೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಡಿಸೆಂಬರ್ 7ರಂದು ಪುತ್ತೂರು ಪುರಭವನದಲ್ಲಿ ನಡೆಸಲು ಉದ್ದೇಶಿಸಿರುವ ‘ ಬ್ಯಾರಿ ಅಕಾಡೆಮಿ ಚಮ್ಮನ’ (ಗೌರವ ಪುರಸ್ಕಾರ) ಮತ್ತು ‘ವಿದ್ಯಾರ್ಥಿ ಸಂಗಮ’ ಕಾರ್ಯಕ್ರಮದ ಪೂರ್ವಭಾವಿ ಸಭೆ ಇತ್ತೀಚೆಗೆ ಬೊಳುವಾರಿನ ಆಕರ್ಷಣ್ ಬಿಲ್ಡರ್ಸ್ ಕಛೇರಿಯಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಬ್ಯಾರಿ ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು. ಬ್ಯಾರಿ ಸಾಂಪ್ರದಾಯಿಕ ಆಹಾರ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿಯನ್ನು ರಚಿಸುವುದೆಂದು ತೀರ್ಮಾನಿಸಲಾಯಿತು.





ಕೆ.ಪಿ. ಅಹ್ಮದ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಹೆಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಅಕಾಡೆಮಿಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.
ಸಭೆಯಲ್ಲಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಡಾ.ಹಾಜಿ ಯಸ್.ಅಬೂಬಕ್ಕರ್ ಆರ್ಲಪದವು, ನ್ಯಾಯವಾದಿ ಕೆ.ಎಂ. ಸಿದ್ದೀಕ್, ಹಾಜಿ ಅಬ್ದುಲ್ ರಹಿಮಾನ್ ಆಝಾದ್, ಹಾಜಿ ಅಶ್ರಫ್ ಕಲ್ಲೆಗ , ವಿ. ಕೆ. ಶರೀಫ್ ಬಪ್ಪಳಿಗೆ, ಅಬ್ದುಲ್ ಹಮೀದ್ ಸೋಂಪಾಡಿ, ಉಮರ್ ಕರಾವಳಿ, ಮುಹಮ್ಮದ್ ಶಾಫಿ ಪಾಪೆತಡ್ಕ, ಶೇಖ್ ಝೈನುದ್ದೀನ್ ಮತ್ತು ಪಿ. ಮುಹಮ್ಮದ್ ಉಪಸ್ಥಿತರಿದ್ದರು. ಬಿ.ಎ. ಶಕೂರ್ ಹಾಜಿ ಕಲ್ಲೆಗ ಸ್ವಾಗತಿಸಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಂದಿಸಿದರು.










