





ನೆಲ್ಯಾಡಿ: ಜೇಸಿಐ ನೆಲ್ಯಾಡಿ ಇದರ 42ನೇ ವರ್ಷದ, 2025ನೇ ಸಾಲಿನ ಘಟಕಾಡಳಿತ ಮಂಡಳಿ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮತ್ತು ತಂಡದ ಪದಸ್ವೀಕಾರ ಸಮಾರಂಭ ಜ.16ರಂದು ಸಂಜೆ 6 ಗಂಟೆಗೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.


ಅತಿಥಿಗಳಾಗಿ ಜೇಸಿಐ ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ., ಭಾರತ ಹಾಗೂ ಮಾಲ್ಡೀವ್ಸ್ ಟ್ರೇಡ್ ಕೌನ್ಸಿಲ್ ಉಪಾಧ್ಯಕ್ಷರು, ಉದ್ಯಮಿಯೂ ಆದ ಹೇಮಂತ್ ರೈ ಮನವಳಿಕೆ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ನೋಮೀಸ್ ಪಿ.ಕುರಿಯಾಕೋಸ್ ಭಾಗವಹಿಸಲಿದ್ದಾರೆ. ಜೇಸಿಐ ವಲಯ 15ರ ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ನೆಲ್ಯಾಡಿ ಜ್ಯೋತಿರ್ವೈದ್ಯ ಚಿಕಿತ್ಸಾಲಯದ ಡಾ.ಅನೀಶ್ ಉಪಸ್ಥಿತರಿರಲಿದ್ದಾರೆ.





ಜೇಸಿಐ ನೆಲ್ಯಾಡಿ ಇದರ 2024ನೇ ಸಾಲಿನ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅವರು ವಿಶೇಷ ಆತಿಥ್ಯ ನೀಡಲಿದ್ದಾರೆ ಎಂದು ಜೇಸಿಐ ಪ್ರಕಟಣೆ ತಿಳಿಸಿದೆ.









