ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ‘ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜನವರಿ 15 ರಂದು 8,9 ಮತ್ತು 10ನೇ ತರಗತಿಗಳ ಮಕ್ಕಳಿಗೆ ಹಾಗೂ ಪೋಷಕರಿಗೆ “ವೃತ್ತಿ ಮಾರ್ಗದರ್ಶನ” ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಪ್ರಾಧ್ಯಾಪಕ ಮತ್ತು ಪ್ರಧಾನ ತನಿಖಾಧಿಕಾರಿ ಡಾ. ಅನಂತಪ್ರಭು .ಜಿ ಅವರು ಮಕ್ಕಳು ನೀಟ್, ಸಿ.ಇ.ಟಿ., ಜೆ.ಇ.ಇ. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?, ಆ ಪರೀಕ್ಷೆಗಳನ್ನು ಎದುರಿಸಬೇಕಾದರೆ ತೆಗೆದುಕೊಳ್ಳಬೇಕಾದ ಕೋರ್ಸುಗಳು ಯಾವುವು?, ಯಾವ ಕೊರ್ಸುಗಳನ್ನು ತೆಗೆದುಕೊಂಡರೆ ಉತ್ತಮ?, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಡಬೇಕಾದ ತಯಾರಿ, ಚಾಟ್, ಜಿ.ಪಿ.ಟಿ ಇತ್ಯಾದಿಗಳನ್ನು ಉಪಯೋಗಿಸುವುದರ ಬಗ್ಗೆ ಮಾಹಿತಿಗಳನ್ನು ನೀಡಿದರು.

ಮುಂದಿನ ದಿನಗಳಲ್ಲಿ ರೋಬೋಟ್ಗಳು, ಎ.ಐ.ಗಳು ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತವೆ. ಇದರಿಂದ ಉದ್ಯೋಗಕ್ಕಾಗಿ ಪೈಪೋಟಿ ಪ್ರಾರಂಭವಾಗುತ್ತದೆ. ಆದ್ದರಿಂದ ಉದ್ಯೋಗವನ್ನು ಪಡೆಯಬೇಕಾದರೆ ಸಾಕಷ್ಟು ಸ್ಮಾರ್ಟ್ ವರ್ಕ್ ನೊಂದಿಗೆ ಕೌಶಲಗಳನ್ನು ಹೊಂದಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು. ಪೋಷಕರು ಮಕ್ಕಳಿಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಜಂಗ್ ಫುಡ್ ನ್ನು ತಿನ್ನಲು ಕೊಡದೆ, ಪೌಷ್ಟಿಕಾಂಶ ಅಧಿಕವಿರುವ ಆಹಾರವನ್ನು ಕೊಡಬೇಕು ಮತ್ತು ಮಕ್ಕಳನ್ನು ದುರ್ಬಲರನ್ನಾಗಿ ಬೆಳೆಸದೆ ಸಬಲರನ್ನಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಶೈಕ್ಷಣಿಕ ಅಧಿಕಾರಿಯಾದ ಅನುರಾಧ ಶಿವರಾಂರವರು ವಹಿಸಿದರು. ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ , ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಲಾ ಶಿಕ್ಷಕಿಯ ರಶ್ಮಿತಾ ಸ್ವಾಗತಿಸಿ, ರಂಜಿತಾ ಕಾರ್ಯಕ್ರಮ ನಿರೂಪಿಸಿ, ಪ್ರಿಯದರ್ಶಿನಿ ವಂದಿಸಿದರು.

LEAVE A REPLY

Please enter your comment!
Please enter your name here