ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ 2025ನೇ ಸಾಲಿನ ಅಧ್ಯಕ್ಷರಾಗಿ ಯುವ ಉದ್ಯಮಿ ನಟೇಶ್ ಪೂಜಾರಿ ಪುಳಿತ್ತಡಿ ಹಾಗೂ ಕಾರ್ಯದರ್ಶಿಯಾಗಿ ಮಹೇಶ್ ಕೆ. ಆಯ್ಕೆಯಾಗಿದ್ದಾರೆ.
ಐಪಿಪಿಯಾಗಿ ಲವೀನಾ ಪಿಂಟೋ, ಉಪಾಧ್ಯಕ್ಷರಾಗಿ ಡಾ. ಆಶೀತ್ ಎಂ.ವಿ., ಡಾ. ನಿರಂಜನ್ ರೈ, ಗುಣಕರ ಅಗ್ನಾಡಿ, ಚಂದ್ರಶೇಖರ ಶೆಟ್ಟಿ, ಕುಶಾಲಪ್ಪ, ಜೊತೆ ಕಾರ್ಯದರ್ಶಿಯಾಗಿ ಸುಮನ್, ಕೋಶಾಧಿಕಾರಿಯಾಗಿ ಪುರುಷೋತ್ತಮ್ ಪಿ., ಮಹಿಳಾ ಜೇಸಿ ಅಧ್ಯಕ್ಷರಾಗಿ ಪ್ರಮೀಳಾ ಎ. ನಟೇಶ್ ಪೂಜಾರಿ, ಸಂಯೋಜಕಿಯಾಗಿ ವೀಣಾ ಪ್ರಸಾದ್ ಕಜೆ, ಜೆಜೆಸಿ ಅಧ್ಯಕ್ಷರಾಗಿ ಗೌತಮ್ ಗೌಂಡತ್ತಿಗೆ, ಜೆಜೆಸಿ ಸಂಯೋಜಕರಾಗಿ ಲಿಖಿತ್ ಪ್ರಸಾದ್, ಈವೆಂಟ್ ರಾಯಭಾರಿಯಾಗಿ ದಿವಾಕರ ಬಿ., ಸಾಂಸ್ಕೃತಿಕ ಸಂಯೋಜಕರಾಗಿ ಪುನೀತ್ ಎಂ., ಮಾಧ್ಯಮ ವರದಿಗಾರನಾಗಿ ವಿಜಯ ಕೆ., ವ್ಯವಹಾರ ಸಂಯೋಜಕರಾಗಿ ಸುಜೀತ್ ಪ್ರಸಾದ್, ನಿರ್ದೇಶಕರಾಗಿ ಅವನೀಶ್, ಮುರಳೀಧರ ಎ.ಎಸ್., ತುಷಾರ್ ಆಯ್ಕೆಯಾಗಿದ್ದಾರೆ ಹಾಗೂ ೨೫ ಜನರನ್ನೊಳಗೊಂಡ ಸಲಹಾ ಸಮಿತಿಯನ್ನೂ ರಚಿಸಲಾಗಿದೆ.
ಜ.20ರಂದು ಪದಪ್ರದಾನ ಸಮಾರಂಭ
ಜೇಸಿಐ ಉಪ್ಪಿನಂಗಡಿ ಘಟಕದ ನೂತನ ತಂಡದ ಪದಪ್ರದಾನ ಸಮಾರಂಭ ಜ.20ರಂದು ಸಂಜೆ 7ಗಂಟೆಗೆ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಜೇಸಿಐ ವಲಯ 15ರ ಅಧ್ಯಕ್ಷ ಅಭಿಲಾಷ್ ಬಿ.ಎ., ನಿಕಟಪೂರ್ವ ವಲಯಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್., ವಲಯ ಉಪಾಧ್ಯಕ್ಷ ಸುಹಾಶ್ ಎ.ಪಿ.ಎಸ್. ಭಾಗವಹಿಸಲಿದ್ದಾರೆ ಎಂದು ಜೇಸಿಐನ ಐಪಿಪಿ ಶೇಖರ ಗೌಂಡತ್ತಿಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.