ಪುತ್ತೂರು: ಸ್ವ ಉದ್ಯೋಗದೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾವು ಅಂಬೇಟಡ್ಕ ಶ್ರೀ ಮಾರಿಯಮ್ಮ ದೇವಸ್ಥಾನದ ಧರ್ಮದರ್ಶಿ ಚಂದ್ರ ಎಂಬವರು ವಿಶೇಷ ಚೇತನ ಯೋಗೀಶ್ ಎಂಬವರಿಗೆ ಕೊಡುಗೆಯಾಗಿ ನೀಡಿದ ಶ್ರೀ ಮಾರಿಯಮ್ಮ ಗೂಡಂಗಡಿಯ ಉದ್ಘಾಟನೆ ಜ.17 ರಂದು ನಗರದ ಮಂಜಲಪಡ್ಪುವಿನಲ್ಲಿ ನಡೆಯಿತು.
ಎಂ ವಿ ಗ್ರೂಪ್ ಆಫ್ ಸೋಶಿಯಲ್ ಸರ್ವಿಸಸ್ ಸಂಸ್ಥೆಯ ಸಂಸ್ಥಾಪಕ, ರೋಟರಾಕ್ಟ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಸುಬ್ರಮಣಿ ಪಿವಿ ಗೂಡಂಗಡಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕು ಪುನರ್ವಸತಿ ಕಾರ್ಯಕರ್ತ ನವೀನ್, ನಗರ ಪುನರ್ವಸತಿ ಕಾರ್ಯಕರ್ತ ಭರತ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮಲ್ಲ, ರೋಟರಾಕ್ಟ್ ಕ್ಲಬ್ ಕಾರ್ಯದರ್ಶಿ ವಿಶಾಲ್, ಸಮಾಜ ಸೇವಕ ರಫೀಕ್ ಬಪ್ಪಳಿಗೆ ಸೇರಿದಂತೆ ಹಲವಾರು ಬಂಧು-ಮಿತ್ರರು ಉಪಸ್ಥಿತರಿದ್ದು, ಶುಭ ಹಾರೈಸಿದರು.