ಪುತ್ತೂರು: ಸಿರಿ ಕಡಮಜಲು ಕೃಷಿ ಕ್ಷೇತ್ರಕ್ಕೆ ಸಾಹಿತಿಗಳು, ನಿವೃತ ಪ್ರಾದ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಇತ್ತೀಚೆಗೆ ಭೇಟಿ ನೀಡಿದರು.
ಈ ಸಂದರ್ಭ ಡಾ. ನರೇಂದ್ರ ರೈ ದೇರ್ಲ ರವರಿಗೆ ಶಾಲು, ಫಲ ವಸ್ತು, ಬೆಳೆಸಿದ ತರಕಾರಿಗಳನ್ನು ನೀಡಿ ನಿವೃತ ಜೀವನಕ್ಕೆ ಕಡಮಜಲು ಸುಭಾಷ್ ರೈ ರವರು ಶುಭಹಾರೈಸಿದರು.
ಕಡಮಜಲುರವರು ತನ್ನ 75ನೇ ವರ್ಷದ ಚಿರಣತಿ ಸಂದರ್ಭ ಸಾಹಿತ್ಯ ಲೋಕಕ್ಕೆ ಅರ್ಪಿಸುವ ಸಾಹಿತ್ಯ ಕೃತಿ ‘ಪ್ರೀತಿಯಿಂದ ಪ್ರೀತಿಗೆ ‘ ಕೃತಿಗೆ ದೇರ್ಲರವರು ಬರೆದ ಶುಭ ಸಂದೇಶವನ್ನು ಸಮರ್ಪಿಸಿದರು. ಶುಭ ಸಂದೇಶದಲ್ಲಿ ಸಿರಿ ಕಡಮಜಲು ಕೃಷಿ ಕ್ಷೇತ್ರದ ಸಸ್ಯ ಚಾಲನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರೀತಿ ಎಸ್. ರೈ ಯವರು ಶುಭ ಹಾರೈಸಿದರು.