ಪುತ್ತೂರು: ಮುಕ್ವೆ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮದ ಧ್ವಜಾರೋಹಣ ಜ.19ರಂದು ಬೆಳಿಗ್ಗೆ ನಡೆಯಿತು. ಸಯ್ಯದ್ ಎಂ.ಎಸ್ ತಂಙಳ್ ಓಲೆಮುಂಡೋವು ಧ್ವಜಾರೋಹಣ ನೆರವೇರಿಸಿದರು.
ಮುಕ್ವೆ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್ ಅಧ್ಯಕ್ಷತೆ ವಹಿಸಿದ್ದರು. ಮುಕ್ವೆ ಮಸೀದಿಯ ಖತೀಬ್ ಇರ್ಶಾದ್ ಫೈಝಿ ಪಾಲ್ತಾಡ್ ಕಾರ್ಯಕ್ರಮ ನಿರ್ವಹಿಸಿದರು.
ಹಲವಾರು ಮಂದಿ ಗಣ್ಯರು, ಜಮಾಅತರು ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ಮಖಾಮ್ ಝಿಯಾರತ್ ನಡೆಯಿತು.