ಸಸ್ಯಜಾತ್ರೆ: ಸ್ಪರ್ಧೆಗಳಲ್ಲಿ ಹಾರಾಡಿ ಶಾಲೆಗೆ ಹಲವು ಬಹುಮಾನ

0

ಪುತ್ತೂರು: ಜ.10ರಿಂದ 12ರವರೆಗೆ ಪುತ್ತೂರಿನಲ್ಲಿ ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಅರಿವು ಕೃಷಿ ಕೇಂದ್ರದ ಸಾರಥ್ಯದಲ್ಲಿ ನಡೆದ ಸಸ್ಯ ಜಾತ್ರೆ ಸೀಸನ್ 2.0 ಇದರಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಹಾರಾಡಿ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದಿದ್ದಾರೆ.


ಪ್ರಾಥಮಿಕ ಶಾಲಾ ವಿಭಾಗದ ಕಾರ್ಟೂನ್ ಚಿತ್ರ ರಚನೆಯಲ್ಲಿ ಪವಿತ್ರ ಬಿ.ಕೆ 7ನೇ ತರಗತಿ ಪ್ರಥಮ ಹಾಗೂ ತನುಶ್ರೀ 7ನೇ ತರಗತಿ ದ್ವಿತೀಯ ಬಹುಮಾನ, ಪ್ರಬಂಧ ರಚನೆ ಪ್ರಾಥಮಿಕ ವಿಭಾಗ ಸುಮನಾ 7ನೇ ತರಗತಿ ಪ್ರಥಮ ಹಾಗೂ ಆರಾಧ್ಯ 7ನೇ ತರಗತಿ ದ್ವಿತೀಯ, ಜೀವಿತ ಹಾಗೂ ಅಕಾಂಕ್ಷ ಪ್ರೋತ್ಸಾಹಕ ಬಹುಮಾನ, ಕವನ ರಚನೆ ಸ್ಪರ್ದೆಯಲ್ಲಿ ಪವಿತ್ರ ಬಿ.ಕೆ ತೃತೀಯ ಹಾಗೂ ಅನ್ವಿತ, ಜೀವಿತ, ಹಾಗೂ ಆರಾಧ್ಯ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದ್ದಾರೆ.


ಪ್ರೌಢಶಾಲಾ ವಿಭಾಗದ ಸ್ಪರ್ಧೆಗಳಲ್ಲಿ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಸ್ತುತಿ 8ನೇ ತರಗತಿ ದ್ವಿತೀಯ, ಪ್ರಬಂಧ ರಚನೆಯಲ್ಲಿ ಮೌಲ್ಯ 8ನೇ ತರಗತಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ ಎಂದು ಮುಖ್ಯಶಿಕ್ಷಕ ಕೆ.ಕೆ ಮಾಸ್ಟರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here