ಸಮಾಜದ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ-ದೇವರಶೋಲ ಉಸ್ತಾದ್
ಪುತ್ತೂರು: ತಾಯಿ ತಂದೆಯನ್ನು ಗೌರವಿಸಿ, ಅವರ ಪ್ರೀತಿ ಸ್ನೇಹ, ತ್ಯಾಗವನ್ನು ಮಕ್ಕಳು ಅರಿತುಕೊಂಡಲ್ಲಿ ಜೀವನಪೂರ್ತಿ ಸುಖದಿಂದಿರಬಹುದು ಎಂದು ಪಾಂಡದರ ಮರ್ಕಝ್ ಗೂಡಲ್ಲೂರು ಪ್ರಾಂಶುಪಾಲರಾದ ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರಶೋಲ ಹೇಳಿದರು. ಅವರು ಜ.20ರಂದು ಬೆಳ್ಳಾರೆಯಲ್ಲಿ ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಇದರ ಮೇಲಂತಸ್ತಿನ ಹಾಸ್ಟೆಲ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಿದ್ದಲ್ಲಿ ಅವರು ಉತ್ತಮ ಪ್ರಜೆಯಾಗಲು ಸಾಧ್ಯ, ಸಮಾಜದ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ಎಂದು ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ. ನಮ್ಮನ್ನು ನಾವು ಕೆಟ್ಟ ತೀರ್ಮಾನಗಳಿಂದ ಸೋತು ಕಂಗೆಟ್ಟು ಕುಳಿತಾಗ ನಮ್ಮ ಕೈ ಹಿಡಿದು ಸಲುಹುವವರು ನಮ್ಮ ತಾಯಿ ತಂದೆ ಮಾತ್ರ, ಅಂತಹ ತಂದೆ ತಾಯಿಯರು ಕಣ್ಣೀರು ಹಾಕುವ ಯಾವುದೇ ತೀರ್ಮಾನವನ್ನು ಯುವಜನತೆ ತೆಗೆದುಕೊಳ್ಳಬಾರದು, ಹಾಗೆಂದು ತೆಗೆದುಕೊಂಡಲ್ಲಿ ತಂದೆ ತಾಯಿಯ ಕಣ್ಣೀರು ಜೀವನ ಪರ್ಯಂತ ಕಾಡದಿರದು, ತಂದೆ ತಾಯಿಯರಿಗೂ ಕೂಡ ಮಕ್ಕಳೇ ಸರ್ವಸ್ವ, ಅವರಿಗೆ ಒಳ್ಳೆಯ ಧಾರ್ಮಿಕ ಶಿಕ್ಷಣ ನೀಡಿ ಅವರನ್ನು ಅಮೂಲ್ಯ ಸಂಪತ್ತಾಗಿಸಿ ಎಂದು ಕರೆ ನೀಡಿದರು. ಇಲ್ಲಿ ಹತ್ತು ಮಕ್ಕಳು ಖರಾನ್ ಶಿಕ್ಷಣ ಪಡೆದು, ಅವರಿಗೆ ಸನುದುದಾನ ನೀಡುತ್ತಿರುವುದು ಅತೀವ ಸಂತೋಷವಾಗುತ್ತಿದೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಈ ಮಕ್ಕಳು ಧಾರ್ಮಿಕ ಶಿಕ್ಷಣಕ್ಕೆ ಒತ್ತು ನೀಡಿರುವುದು ಅಭಿನಂದನೀಯ, ಇವರೆಲ್ಲರಿಗೂ ನಮ್ಮ ಮಕ್ಕಳೆಂಬ ಪ್ರೀತಿಯನ್ನು ನಾವು ಕೊಡಬೇಕಾಗಿದೆ. ಇಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗಲು ಮುಂಚೂಣಿಯಲ್ಲಿ ನಿಂತ ಪ್ರಮುಖರ ಹಾಗೂ ಸಹಕರಿಸಿದವರ ಮನಸ್ಸು ಪರಿಶುದ್ದವಾಗಿದೆ, ಹಾಗಾಗಿ ಈ ರೀತಿಯ ಕಟ್ಟಡ ತೆಲೆಯೆತ್ತಿ ನಿಂತು ಇನ್ನಷ್ಟು ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.
ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಸ್ಟೆಲ್ ಕಟ್ಟಡ ಉದ್ಘಾಟಿಸಿ ದುವಾ ನಿರ್ವಹಿಸಿದರು.
ಮಾಪಲಡ್ಕ ಮುದರಿಸ್ ಹಾಫಿಝ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸೌದಿ ನ್ಯಾಷನಲ್ ಕಮಿಟಿ ಅಧ್ಯಕ್ಷ ರಶೀದ್ ಬೆಳ್ಳಾರೆ ವಹಿಸಿದ್ದರು. ಸಯ್ಯದ್ ಕಾಜೂರ್ ತಂಙಳವರ ನೇತೃತ್ವದಲ್ಲಿ ಸಂಸ್ಥೆಯಲ್ಲಿ ಕಲಿತು ಸಂಪೂರ್ಣವಾಗಿ ಖುರಾನ್ ಕಂಠಪಾಠ ಮಾಡಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಸನದುದಾನ ವಿತರಣೆ ನಡೆಯಿತು.
ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಸೌದಿ ರಾಷ್ಟೀಯ ಸಮಿತಿ ಕೋಶಾಧಿಕಾರಿ ಸ್ವಾಲಿಹ್ ಬೆಳ್ಳಾರೆ ಇದರ ಕೋಶಾಧಿಕಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಗಲ್ಫ್ ರಾಷ್ಟ್ರಗಳಲ್ಲಿರುವ ಸಹೃದಯಿ ದಾನಿಗಳ ನೆರವಿನಿಂದ ಈ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ, ಅವರೆಲ್ಲರ ಬೆವರ ಹನಿ ಈ ಕಟ್ಟಡದಲ್ಲಿದೆ ಎಂದ ಅವರು ದಾನಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಬಿ ಎ ಮಹಮೂದ್ ಬೆಳ್ಳಾರೆ, ಹಸ್ಸನ್ ಸಖಾಫಿ ಬೆಳ್ಳಾರೆ, ಸ್ವಾಗತ ಸಮಿತಿಯ ಅಬ್ದುಲ್ ಹಮೀದ್ ಆಲ್ಫಾ, ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಇದರ ವಿವಿಧ ಪದಾಧಿಕಾರಿಗಳು, ಸಯ್ಯದರು, ಉಲಮಾಗಳು, ಉಮಾರಾ ನೇತಾರರು, ಗಲ್ಫ್ ಪ್ರತಿನಿಧಿಗಳು, ಉದ್ಯಮಿಗಳು, ರಾಜಕೀಯ, ಸಾಮಾಜಿಕ ನಾಯಕರು ಭಾಗವಹಿಸಿದ್ದರು. ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ ದಾವೂದ್ ಸಹದಿ ಬೆಳ್ಳಾರೆ ಸ್ವಾಗತಿಸಿದರು. ವಿದ್ಯಾರ್ಥಿ ಮಹಮ್ಮದ್ ಸಲ್ಮಾನ್ ಖಿರಾಅತ್ ನಡೆಸಿದರು. ಹಾಜಿ ಯೂಸಫ್ ಚೆನ್ನಾರ್ ವಂದಿಸಿದರು.