ಇಂದಿನ ಕಾರ್ಯಕ್ರಮ (23/01/2025)

0

  • ಪುತ್ತೂರು ನಗರ ಸಭೆ, ತಾಲೂಕು ಪಂಚಾಯತ್‌ನ ಸಹಯೋಗದೊಂದಿಗೆ ನಗರ ಸಭೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ’ ಧ್ಯೇಯವಾಕ್ಯದೊಂದಿಗೆ ಸ್ವಚ್ಛತಾ ಶ್ರಮದಾನ ಅಭಿಯಾನ
  • ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರಗಳ ಪರಿಶೀಲನೆ
  • ಆಲಂತಾಯ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಗೋಳಿತ್ತೊಟ್ಟು ಗ್ರಾ.ಪಂನ ಆಲಂತಾಯ ೧ನೇ ವಾರ್ಡ್‌ನ ವಾರ್ಡುಸಭೆ
  • ಬೆಟ್ಟಂಪಾಡಿ ಗ್ರಾ.ಪಂ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸ್ವಚ್ಛತಾ ಅಭಿಯಾನದ ಪೂರ್ವಭಾವಿ ಸಭೆ
  • ಇಡ್ಕಿದು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮಕ್ಕಳ ಗ್ರಾಮಸಭೆ
  • ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಭಜನೆ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ
  • ಮುಂಡೂರು ಪಂಜಳ ಶಾಂತಿಗಿರಿ ವಿದ್ಯಾ ನಿಕೇತನ ಶಾಲೆಯಲ್ಲಿ ಸಂಜೆ ೩ರಿಂದ ಶಾಲಾ ವಾರ್ಷಿಕೋತ್ಸವ
  • ಸಾಲ್ಮರ ಕೆರೆಮೂಲೆ ಧೂಮಾವತಿ, ಪರಿವಾರ ದೈವಗಳ ತರವಾಡು ಮನೆಯಲ್ಲಿ ಸಂಜೆ ೬ರಿಂದ ಆಲಯ ಪರಿಗ್ರಹ, ಪ್ರಾರ್ಥನೆ, ರಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಬಲಿ, ದಿಕ್ಪಾಲಬಲಿ, ಬಿಂಬಾಧಿವಾಸ
  • ಕೆಯ್ಯೂರು ಶ್ರೀ ದುರ್ಗಾ ಸ್ಪೋಟ್ಸ್ ಕ್ಲಬ್‌ನಲ್ಲಿ ೨೧ನೇ ವರ್ಷದ ವಾರ್ಷಿಕೋತ್ಸವ, ಏರ‍್ಲಾ ಗ್ಯಾರಂಟಿ ಅತ್ತ್-ತುಳು ನಾಟಕ
  • ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ೨ರಿಂದ ಧೂಮಾವತಿ ದೈವದ ನೇಮೋತ್ಸವ, ೯ರಿಂದ ಮಲರಾಯ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಆನಾಜೆಯಲ್ಲಿ ಉಳ್ಳಾಕುಲು ದೈವಗಳ ಅವಭೃತ ಸ್ನಾನ, ನಾಗನ ಕಟ್ಟೆಯಲ್ಲಿ ನಾಗತಂಬಿಲ, ದೈವಗಳಿಗೆ ತಂಬಿಲಗಳು
  • ಮುಕ್ವೆ ರಹ್ಮಾನಿಯಾ ಜುಮಾ ಮಸೀದಿ ವಲಿಯುಲ್ಲಾಹಿ ದರ್ಗಾ ಶರೀಫ್ ಮರ್‌ಹೂಂ ಸಯ್ಯಿದ್ ಪಾಣಕ್ಕಾಡ್ ಪಿ.ಎಂ.ಎಸ್.ಎ ಪೂಕೋಯ ತಂಙಳ್ ನಗರದಲ್ಲಿ ಮುಕ್ವೆ ಮಖಾಂ ಉರೂಸ್, ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ
  • ಕೊಳ್ತಿಗೆ ಗ್ರಾಮ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಶ್ರೀ ರಕ್ತೇಶ್ವರಿ, ಧೂಮ್ರ-ಧೂಮಾವತಿ, ಶಿರಾಡಿ ದೈವಗಳ ನೇಮ ನಡಾವರಿ, ಕಾಣಿಕೆ ಹರಕೆ, ಅನ್ನಸಂತರ್ಪಣೆ
  • ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ಪಾದೆ, ಭಂಡಾರದ ಮನೆ, ಆಚಾರಿಪಾಲು, ಕೋಡಿಯಾಡಿ, ಸರೋಳಿ, ಡೆಕ್ಕಾಜೆಯಲ್ಲಿ ಬೈಲುವಾರು ಭಜನೆ
  • ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಬಲಿ ಉತ್ಸವ, ಮಹಾಪೂಜೆ, ಸಮಾರಾಧನೆ, ರಾತ್ರಿ ಬಲಿ ಉತ್ಸವ, ಕಟ್ಟೆಪೂಜೆ
  • ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ, ಇರ್ವೆರ್ ಉಳ್ಳಾಕುಲ ದೈವಗಳ ಕ್ಷೇತ್ರ ಅಮರ ಕಾಸ್ಪಾಡಿಯಲ್ಲಿ ದೈವಗಳ ಬಂಡಿ ಉತ್ಸವ, ರಾತ್ರಿ ೮ಕ್ಕೆ ಪೂಮಾಣಿ ದೈವ, ಪೂವಲಂಕಮ್ಮ ದೆಯ್ಯರೆ ನೇಮೋತ್ಸವ ಕೀಲೆ ಮಾಡದಲ್ಲಿ
  • ಅರಿಯಡ್ಕ ಗ್ರಾಮ ದೈವ ಧೂಮಾವತಿ ಕ್ಷೇತ್ರದ ವಠಾರದಲ್ಲಿ ಗ್ರಾಮದೈವ ಧೂಮಾವತಿ, ಶ್ರೀ ರಕ್ತೇಶ್ವರಿ ದೈವಸ್ಥಾನದ ಪುನಃ ಪ್ರತಿಷ್ಠಾ ವಾರ್ಷಿಕೋತ್ಸವ
  • ಕಡಬ ಶ್ರೀ ಶ್ರೀಕಂಠಸ್ವಾಮಿ, ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಜೆ ೬.೩೦ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಪೂಜಾ ಬಲಿ
  • ಹಿರೇಬಂಡಾಡಿ ಸರೋಳಿ ನಾಗದೇವರು, ನಾಗಕನ್ನಿಕೆ, ರಕ್ತೇಶ್ವರಿ, ಗುಳಿಗ, ಬೈರವ ಸಾನಿಧ್ಯದಲ್ಲಿ ಸಂಜೆ ೬ರಿಂದ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ಪರಿವಾರ ದೈವ ಸಾನಿಧ್ಯದಲ್ಲಿ ವಾಸ್ತು ಹೋಮ, ವಾಸ್ತು ಬಲಿ
  • ತುರ್ಕಳಿಕೆ ಹಯಾತುಲ್ ಔಲಿಯಾ ದರ್ಗಾ ಶರೀಫ್ ವಠಾರದಲ್ಲಿ ಉರೂಸ್ ಮುಬಾರಕ್

LEAVE A REPLY

Please enter your comment!
Please enter your name here