ಪೆರ್ನೆ – ಬಿಳಿಯೂರು: ತಿಪ್ಪಕೋಡಿಯಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಬಯಲಾಟ

0

ವುತ್ತೂರು : ಬಂಟ್ವಾಳ ತಾಲೂಕಿನ ಪೆರ್ನೆ – ಬಿಳಿಯೂರು ಗ್ರಾಮದ ತಿಪ್ಪಕೋಡಿ ಬಾಲಕೃಷ್ಣ ಮಹಾಬಲ ರೈ ಇವರ ಮನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಮೇಳದಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಕಥಾಭಾಗವು ಬಯಲಾಟವಾಗಿ ಜ.22 ರಂದು ನಡೆಯಿತು.


ಅಪರಾಹ್ನ 3.30 ರಿಂದ ಸಂಜೆ 5.30 ರ ತನಕ ಶ್ರೀ ದುರ್ಗಾ ಮಹಾಲಕ್ಷ್ಮೀ ಭಜನಾ ಮಂಡಳಿ “ಶ್ರೀ ಧಾಮ” ಮಾಣಿಲ ತಂಡದ ಸದಸ್ಯರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾತ್ರಿ 8 ರ ಬಳಿಕ ಶ್ರೀದೇವರ ಪ್ರಸಾದವಾಗಿ ಸಾರ್ವಜನಿಕ ಅನ್ನಸಂತರ್ಪಣೆಯು ಕೂಡ ನೆರವೇರಿತು. ಈ ವೇಳೆ ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ , ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯೆ ಮಲ್ಲಿಕಾ ಪಕ್ಕಳ ಸಹಿತ ಹಲವರು ಅತಿಥಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.


ತಿಪ್ಪಕೋಡಿ ಬಾಲಕೃಷ್ಣ ಮಹಾಬಲ ರೈ ಅತಿಥಿಗಳನ್ನು ಗೌರವಿಸಿದರು.ಕುಟುಂಬ ವರ್ಗದ ಸದಸ್ಯರುಗಳು ವಿವಿಧ ರೀತಿಯಲ್ಲಿ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here