





ಅಧ್ಯಕ್ಷ ಸೀತಾರಾಮ ಕೊಪ್ಪ, ಉಪಾಧ್ಯಕ್ಷೆ ರಮಣಿ


ಕಾಣಿಯೂರು: ಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಸಮಿತಿಯು ಪೋಷಕರ ಸಭೆಯಲ್ಲಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಸೀತಾರಾಮ ಕೊಪ್ಪ ಮತ್ತು ಉಪಾಧ್ಯಕ್ಷರಾಗಿ ರಮಣಿ ಅವರನ್ನು ಆಯ್ಕೆ ಮಾಡಲಾಯಿತು.





ಸೀತಾ, ಉಮೇಶ, ಬಾಬು, ಶಾರದಾ, ಸುಮಯ್ಯ, ಅಸ್ಮಾ, ಸಮೀನಾ, ನೀಲಾವತಿ, ದೇವಿಪ್ರಸಾದ್, ಲೋಕೇಶ್, ಬೆಳಿಯಪ್ಪ ಗೌಡ, ಮಂಜುಳಾ, ಉಷಾ, ಶೋಭಾ, ಮಮತ, ವಿಜಯ ರವರು ಸದಸ್ಯರಾಗಿ ಆಯ್ಕೆಯಾದರು.
ಶಾಲಾ ಎಸ್.ಡಿ.ಎಂ.ಸಿ ರಚನೆಯು ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ಪ್ರಭಾರ ಶಾಲಾ ಮುಖ್ಯಗುರು ನಾರಾಯಣ.ಡಿ. ಹಾಗೂ ಶಾಲಾ ಶಿಕ್ಷಕರ, ಪೋಷಕರ ಸಮ್ಮುಖದಲ್ಲಿ ರಚಿಸಲಾಯಿತು.










