ಪೆರಾಬೆ: ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಲು ಕುಟುಂಬ ಸಮೇತ ತೆರಳುತ್ತಿರುವ ಹನೀಫ್ ದಾರಿಮಿಯವರಿಗೆ ಹಾಗೂ ಕುಂತೂರು ಕೋಚಕಟ್ಟೆ ಮದ್ರಸದ 2ನೇ ತರಗತಿ ವಿದ್ಯಾರ್ಥಿ ಮಾ| ಅಹ್ಮದ್ ಹಾಶೀಂರವರಿಗೆ ನೂರುಲ್ ಹುದಾ ಮದ್ರಸ ವತಿಯಿಂದ ಹಾಗೂ ಎಸ್‌ವೈಎಸ್ ಕುಂತೂರು ಯೂನಿಟ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಮದ್ರಸ ಅಧ್ಯಕ್ಷರಾದ ಜ| ಹಮೀದ್ ಅಜ್ಮೀರ್ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಸದರ್ ಉಸ್ತಾದ್ ಬಹು| ಫಾರೂಕ್ ದಾರಿಮಿ ದುಃವಾ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಮದ್ರಸದ ಉಪಾಧ್ಯಕ್ಷರಾದ ಅಬ್ಬಾಸ್ ಕೆಎಸ್‌ಆರ್‌ಟಿಸಿ, ಮದ್ರಸ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲ್ ಅಮೀನ್, ಸದಸ್ಯರಾದ ಆದಂ ಸಾಹೇಬ್, ಉಮ್ಮರ್ ಪೊಸೋಳಿಗೆ, ರಮ್ಲಾ ಕೋಚಕಟ್ಟೆ, ಲತೀಫ್ ಮಕ್ಬೂಲ್, ಹಂಝ ಹೊಸಮನೆ, ಇಬ್ರಾಹಿಂ ಹೊಸಮನೆ, ಅಝೀಜ್ ಕೆ.ಪಿ., ಅಬೂಬಕ್ಕರ್ ಡಿ.ಎಸ್., ಅಶ್ರಫ್ ಎಂ.ಕೆ., ಅಬ್ದುಲ್ ರಹಿಮಾನ್ ಅಂಗಡಿ ಕುಂತೂರು ಜಮಾಹತ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕೆ, ಎಸ್‌ವೈಎಸ್ ಅಧ್ಯಕ್ಷರಾದ ಅಬ್ದುಲ್ಲಾ ಪಿ.ಎ., ಉಪಾಧ್ಯಕ್ಷರಾದ ಇಸ್ಮಾಯಿಲ್ ಅಲ್ ಅಮೀನ್, ಅನೀಸ್ ನೂಜಿಲ, ಕಾರ್ಯದರ್ಶಿ ಶರೀಫ್ ಮಶ್ರೀಕ್, ಸಲಹೆಗಾರರಾದ ಇಬ್ರಾಹಿಂ ಕಜೆ, ಸದಸ್ಯರಾದ ಅಬ್ಬಾಸ್ ಪೊಸೋಳಿಗೆ, ಝಕಾರಿಯಾ ಬದ್ರಿಯಾಸ್ಟೋರ್, ಎಸ್‌ಕೆಎಸ್‌ಬಿವಿ ಅಧ್ಯಕ್ಷರಾದ ಮಾ| ಅನ್ವಝ್, ಉಪಾಧ್ಯಕ್ಷರಾದ ಮಾ| ರೀಶಾನ್, ಕಾರ್ಯದರ್ಶಿ ಮಾ| ಶಾಝಿಲ್, ಕೋಶಾಧಿಕಾರಿ ಮಾ|ಝಾಹೀರ್ ಕೆ ಉಪಸ್ಥಿತರಿದ್ದರು.