ಪುತ್ತೂರು : ಕಡಬ ತಾಲೂಕಿನ ಪುತ್ತೂರು ವಲಯದ ಶ್ರೀ ಕೃಷ್ಣ ಗೊಲ್ಲ ಸೇವಾ ಟ್ರಸ್ಟ್ ನ ಸಭೆಯು ಸವಣೂರು ಗ್ರಾಮದ ಇಡ್ಯಾಡಿ ವಾಸುದೇವರವರ ಮನೆಯಲ್ಲಿ ಜರಗಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ,ಮಾತನಾಡಿದರು. ಅಲೆಮಾರಿ ಮತ್ತು ಅರೆ ಅಲೆಮಾರಿ ರಾಜ್ಯ ಸಮಿತಿಯ ಸದಸ್ಯ ಅನಂತ ಕೃಷ್ಣ ಮಂಗಳೂರು ರವರು ದೀಪ ಬೆಳಗಿಸಿ, ಉದ್ಘಾಟಿಸಿದರು.
ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಸುರೇಶ್ ಕುಮಾರ್ ಕಾಪಿನಾಕಾಡು , ಬಾಲಕೃಷ್ಣ ಕಾಣಿಯೂರು, ಬಾಲಕೃಷ್ಣ ಇಡ್ಯಾಡಿ ಉಪಸ್ಥಿತರಿದ್ದರು. ವಿಟ್ಲ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲ ಟಿ.ಆರ್, ಮಂಜುನಾಥ ವರದಿ ವಾಚಿಸಿದರು. ಆನಂದ ಇಡ್ಯಾಡಿ, ಪರಮೇಶ್ವರ ಇಡ್ಯಾಡಿ, ದಿವಾಕರ ಬಸ್ತಿ, ರಾಜೇಂದ್ರ ಇಡ್ಯಾಡಿ, ಮೌಲ್ಯ ಪ್ರಸಾದ್ ಇಡ್ಯಾಡಿ, ಸರಸ್ವತಿ ಸೊಂಪಾಡಿ, ಪುರುಷೋತ್ತಮ ನೆಲ್ಯಾಡಿ, ಮಹಾಲಕ್ಷ್ಮಿ ಇಡ್ಯಾಡಿ ರವರುಗಳು ಅತಿಥಿಗಳನ್ನು ಗೌರವಿಸಿದರು.
ಶ್ರೀ ಕೃಷ್ಣ ಗೊಲ್ಲ ಸೇವಾ ಟ್ರಸ್ಟ್ ಅಧ್ಯಕ್ಷ ವಾಸುದೇವ ಇಡ್ಯಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲ್ಯ ಪ್ರಸಾದ್ ಪ್ರಾರ್ಥನೆಗೈದರು. ಶ್ರೀಧರ ಇಡ್ಯಾಡಿ ವಂದಿಸಿದರು. ಜಗದೀಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.