25 ಮಂದಿ ಅಂತಿಮ ಕಣದಲ್ಲಿ ಸಹಕಾರ ಭಾರತಿಯೊಂದಿಗೆ ರೈತ ಸಂಘವೂ ಕಣಕ್ಕೆ
ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿ ಇದರ ಆಡಳಿತ ಮಂಡಳಿ 11 ನಿರ್ದೇಶಕರ ಸ್ಥಾನಕ್ಕಾಗಿ ಫೆ.2ರಂದು ಚುನಾವಣೆಯು ನಡೆಯಲಿದ್ದು, ಬಾರಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಬೆಂಬಲಿತ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದಾರೆ. ಇವರೊಂದಿಗೆ ಸಹಕಾರ ಭಾರತಿ ಬೆಂಬಲಿತ 11 ಮಂದಿ ಹಾಗೂ ಮೂರು ಮಂದಿ ಪಕ್ಷೇತರರು ಸೇರಿದಂತೆ ಒಟ್ಟು 25 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು:
ಸಹಕಾರ ಭಾರತಿಯ ಅಭ್ಯರ್ಥಿಗಳಾಗಿ ವಸಂತ ಪಿ., ಶ್ರೀರಾಮ, ಸದಾನಂದ ಶೆಟ್ಟಿ ಜಿ., ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಷಾ, ಸಂಧ್ಯಾ, ಸುನೀಲ್ ದಡ್ಡು, ದಯಾನಂದ ಎಸ್., ಸುಂದರ ಕೆ., ರಾಘವ ನಾಯ್ಕ, ರಾಜೇಶ್ ಕಣದಲ್ಲಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಬೆಂಬಲಿತ ಅಭ್ಯರ್ಥಿಗಳಾಗಿ ಅನಿ ಮಿನೇಜಸ್, ಪ್ರೆಸಿಲ್ಲಾ ಡಿಸೋಜ, ಕವಿರಾಜ ಜಿ., ರೂಪೇಶ ರೈ, ಶೇಖರ ಪೂಜಾರಿ, ಸತೀಶ್ ಎನ್. ಶೆಟ್ಟಿ, ಶಿವಚಂದ್ರ ಎನ್., ಬಾಲಚಂದ್ರ ಜಿ., ಸಿದ್ದಪ್ಪ ನಾಯ್ಕ ಪಿ., ರವೀಂದ್ರ ಗೌಡ, ತನಿಯ ಮುಗೇರ ಕಣದಲ್ಲಿದ್ದಾರೆ. ಸಂಘದ ಹಾಲಿ ಅಧ್ಯಕ್ಷರಾಗಿದ್ದ ಕೆ.ವಿ. ಪ್ರಸಾದ ಸೇರಿದಂತೆ ಕಲಂದರ್ ಶಾಫಿ, ಚಂದ್ರಪ್ರಕಾಶ್ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಸಾಲಗಾರರಲ್ಲದ ಮತ ಕ್ಷೇತ್ರದಿಂದ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಗೀತಾ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.