ಮುರ: ಬೈಕ್‌, ರಿಕ್ಷಾ ಅಪಘಾತ: ಸವಾರ ಮೃತ್ಯು- ಬಾಲಕ ಪಾರು

0


ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ಫೆ.4ರಂದು ರಾತ್ರಿ ಬೈಕ್ ಮತ್ತು ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.


ಕೆಮ್ಮಿಂಜೆ ಬೈಲು ದಿ.ಪುರುಷೋತ್ತಮ ಎಂಬವರ ಪುತ್ರ ಚೇತನ್(46ವ)ರವರು ಮೃತಪಟ್ಟವರು. ಘಟನೆಯಿಂದ ಬೈಕ್‌ನಲ್ಲಿ ಸಹಸವಾರ ಮನೀಷ್(10ವ)ರವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ತೌಸಿಕ್ ಅವರು ಗಾಯಗೊಂಡಿದ್ದಾರೆ. ಚೇತನ್ ಅವರು ಖಾಸಗಿ ವಿಡಿಯೋ ಗ್ರಾಫರ್ ಕಾರ್ಯನಿರ್ವಹಿಸುತ್ತಿದ್ದು, ಫೆ.4ರಂದು ಅವರು ಮತಾವು ಅಣ್ಣನ ಮನೆಗೆ ಹೋಗಿ ಅಲ್ಲಿಂದ ಅವರ ಮಗಳ ಮಗ ಮನೀಷ್ ಜೊತೆ ಪೋಳ್ಯ ಜಾತ್ರೆಗೆ ತೆರಳಿ ಮತಾವು ಮನೆಗೆಂದು ಬೈಕ್‌ನಲ್ಲಿ ವಾಪಾಸಾಗುತ್ತಿದ್ದ ವೇಳೆ ವಿರುದ್ಧ ಧಿಕ್ಕಿನಿಂದ ಬಂದ ಆಟೋ ರಿಕ್ಷಾ ಬೈಕ್‌ಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಚೇತನ್ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತರು ಇಬ್ಬರು ಅಣ್ಣಂದಿರು ಮತ್ತು ಅಕ್ಕನನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ಬಂದು ಮಾಹಿತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ರಾಮಕ್ಷತ್ರೀಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ, ಪದಾಧಿಕರಿಗಳು ಸದಸ್ಯರು ಯುವ ವೃಂದ ಅಧ್ಯಕ್ಷ ಅನೀಶ್ ಸಹಿತ ಹಲವಾರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here