ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ರಾತ್ರಿ ವಿಶೇಷ ತರಗತಿಯ ಉದ್ಘಾಟನೆ,ತರಬೇತಿ ಕಾರ್ಯಕ್ರಮ

0

ಆಲಂಕಾರು: ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಆಲಂಕಾರಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾತ್ರಿ ವಿಶೇಷ ತರಗತಿಗಳ ಉದ್ಘಾಟನೆ ಹಿರಿಯ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪಾಲಕರ ಪಾತ್ರ ” ಎಂಬ ವಿಷಯದ‌ ಕುರಿತು ವಿದ್ಯಾರ್ಥಿಗಳ ಹೆತ್ತವರಿಗೆ, ಪೋಷಕರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಂದರ ಗೌಡ ವಕೀಲರು, ದೀಪ ಬೆಳಗಿಸಿ ಉದ್ಘಾಟಿಸಿ, ರಾತ್ರಿ ವಿಶೇಷ ತರಗತಿಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶೈಕ್ಷಣಿಕ ಚಿಂತಕರಾದ ಗಿರಿಶಂಕರ ಸುಲಾಯ ರವರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪಾಲಕರ ಪಾತ್ರ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ವಹಿಸಿದ್ದರು. ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ತಾರನಾಥ ರೈ ನಗ್ರಿ, ಇಂದುಶೇಖರ ಶೆಟ್ಟಿ ಕುಕ್ಕೇರಿ, ರಾಮರಾಜ ನಗ್ರಿ, ಹೇಮಂತ್ ರೈ ಮನವಳಿಕೆ, ಆಡಳಿತಾಧಿಕಾರಿಗಳಾದ ಶ್ರೀಪತಿ ರಾವ್ ಎಚ್ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀನಾಥ್ ಗೌಡ ಕೇವಳ, ಉಪಾಧ್ಯಕ್ಷರಾದ ದಯಾನಂದ ಗೌಡ ಬಡ್ಡಮೆ,ಹಿರಿಯ ವಿದ್ಯಾರ್ಥಿ ಸಂಘಟನಾ ಕಾರ್ಯದರ್ಶಿಯಾದ ಮಹೇಶ್, ಉದಯಕುಮಾರ್ ಎಣ್ಣೆತ್ತೋಡಿ, ಪ್ರಾಂಶುಪಾಲರಾದ ರೂಪಾ ಜೆ ರೈ, ಶಿಕ್ಷಕರಾದ ಜನಾರ್ದನ, ಮಹೇಶ್ ಲಮಾಣಿ, ನಿವ್ಯ ರೈ , ಪ್ರಫುಲ್ಲ, ಅಕ್ಷತಾ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ನವೀನ್ ರೈ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಕೃತಿ ಕೆ. ಎಸ್, ಚೈತ್ರ, ಹರ್ಷ, ತೃಪ್ತಿ ಬಿ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಚಂದ್ರಹಾಸ ಕೆ.ಸಿ ವಂದಿಸಿದರು.

LEAVE A REPLY

Please enter your comment!
Please enter your name here