ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳಕ್ಕ ಕುಟುಂಬದ ನೂತನ ತರವಾಡು ಮನೆಯಲ್ಲಿ ಈಗಾಗಲೇ ನಾಗಪ್ರತಿಷ್ಠೆ, ದೈವಗಳ ಪುನರ್ ಪ್ರತಿಷ್ಠೆ, ತರವಾಡು ಮನೆ ಗೃಹಪ್ರವೇಶವು ಕೆಮ್ಮಿಂಜೆ ವೇದಮೂರ್ತಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಗಳ ನೇತೃತ್ವದಲ್ಲಿ ನಡೆದಿದ್ದು. ಫೆ.7 ರಂದು ಧರ್ಮ ದೈವ ರುದ್ರಚಾಮುಂಡಿಯ ನೇಮೋತ್ಸವ ನಡೆಯಲಿದೆ.
ಜನವರಿ 31 ನೇ ಶುಕ್ರವಾರ ಸಂಜೆ ತಂತ್ರಿಗಳ ಆಗಮನವಾಗಿ ರಾತ್ರಿ ಸುದರ್ಶನ ಹೋಮ ನಡೆಯಿತು. ಫೆ.1ನೇ ಶನಿವಾರ ಬೆಳಿಗ್ಗೆ 108 ಕಾಯಿ ಗಣಹೋಮ, ಸಂಜೆ ದುರ್ಗಾಪೂಜೆ,ಮತ್ತು ನಾಗದೇವರ ವಾಸ್ತುಪೂಜೆ ನಡೆಯಿತು. ಫೆ.2 ನೇ ರವಿವಾರ ಬೆಳಗ್ಗೆ ನಾಗದೇವರ ಮತ್ತು ಇತರ ದೈವಗಳ ಪ್ರತಿಷ್ಠೆ, ಸಂಜೆ ತರವಾಡು ಮನೆ ವಾಸ್ತುಪೂಜೆ ನಡೆಯಿತು. ಫೆ.3ನೇ ಸೋಮವಾರ ಬೆಳಿಗ್ಗೆ ತರವಾಡು ಮನೆ ಗೃಹಪ್ರವೇಶ ಮಧ್ಯಾಹ್ನ ಅನ್ನಸಂತರ್ಪಣೆ, ನಡೆಯಿತು. ಫೆ.6ನೇ ಗುರುವಾರ ಸಂಜೆ ದೈವಗಳ ಭಂಡಾರ ತೆಗೆದು, ಸತ್ಯದೇವತೆ, ಕಲ್ಲುರ್ಟಿ, ಪಿಲಿಚಾಮುಂಡಿ, ಮತ್ತು ವರ್ಣಾರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ. ಫೆ.7ನೇ ಶುಕ್ರವಾರ ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ ನೇಮೋತ್ಸವ, ಪ್ರಸಾದ ಬೂಳ್ಯ ವಿತರಣೆ ಬಳಿಕ ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.