ಫೆ.7 ರಿಂದ 16ರವರೆಗೆ ಗಾಳಿಮುಖ ಪುದಿಯವಳಪ್ಪ್ ಮಖಾಂ ಉರೂಸ್

0

ಪುತ್ತೂರು: ದ.ಕ ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರಗಳಲ್ಲಿ ಒಂದಾಗಿರುವ ಗಾಳಿಮುಖ ಪುದಿಯವಳಪ್ಪ್ ಮಖಾಂ ಉರೂಸ್ ಕಾರ್ಯಕ್ರಮ ಫೆ.7 ರಿಂದ 16ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಾರಂಭಗೊಳ್ಳಲಿದೆ ಎಂದು ಗಾಳಿಮುಖ ಪುದಿಯವಳಪ್ಪ್‌ನ ಶಂಸುದ್ದೀನ್ ದಾರಿಮಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಫೆ.7ಕ್ಕೆ ಮಧ್ಯಾಹ್ನ ಧ್ವಜಾರೋಹಣವನ್ನು ಎಂಜೆಎಂ ಅಧ್ಯಕ್ಷ ಅಬೂಬಕ್ಕರ್ ಪಿ.ಎ ಅವರು ನೆರವೇರಿಸಲಿದ್ದಾರೆ. ಬಳಿಕ ದಫ್ ಪ್ರದರ್ಶನ, ಸ್ಕೌಟ್ ನಜುಮುಲ್ ಹುದಾ ಪೆರುಂಬಟ್ಟ, ಫ್ಲವರ್ ಶೋ ಘೋಷಣೆ ರ‍್ಯಾಲಿಯು ಗಾಳಿಮುಖದಿಂದ ಪುದಿಯವಳಪ್ಪ್ ದರ್ಗಾ ಶರೀಫ್ ತನಕ ನಡೆಯಲಿದೆ. ಸಂಜೆ ಸಯ್ಯದ್ ಪೂಕುಞಿ ತಂಙಳ್ ಆದೂರು ಅವರು ಉದ್ಘಾಟಿಸಲಿದ್ದಾರೆ.

ಉಮರುಲ್ ಫಾರೂಕ್ ದಾರಿಮಿ ಖತೀಬ್ ಪುದಿಯವಳಪ್ಪ್ ಮತ್ತು ಗಾಳಿಮುಖ ಬದರ್ ಜುಮಾ ಮಸ್ಜಿದ್‌ನ ದಾರಿಮಿ ಆದಂ ದಾರಿಮಿ ಪ್ರಭಾಷಣ ಮಾಡಲಿದ್ದಾರೆ. ಫೆ.8ರಂದು ರಾತ್ರಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಫೆ.9ರಂದು ರಾತ್ರಿ ಅನ್ವರ್ ಮನ್ನಾನಿ ತೊಡುಪುಝ, ಫೆ.10ಕ್ಕೆ ಡಾ| ಹಾಫಿಲ್ ಜುನೈದ್ ಚೌಹರಿ ಕೊಲ್ಲಂ, ಫೆ.11ಕ್ಕೆ ಅಫ್ಸಲ್ ಖಾಸಿಮಿ ಕೊಲ್ಲಂ, ಫೆ. 12ಕ್ಕೆ ರಾತ್ರಿ ಶಮೀರ್ ದಾರಿಮಿ ಕೊಲ್ಲಂ ಅವರು ಪ್ರಭಾಷಣೆ ಮಾಡಲಿದ್ದಾರೆ. ಫೆ. 13ಕ್ಕೆ ಸ್ವಲಾತ್ ಮಜ್ಲೀಸ್ ನಡೆಯಲಿದೆ. ಅಸ್ಸಯ್ಯದ್ ಕೆ.ಎಸ್ ಅಟ್ಟಿಕೋಯ ತಂಙಳ್ ಕುಂಬೋಲ್ ಅವರು ಅದರ ನೇತೃತ್ವ ವಹಿಸಲಿದ್ದಾರೆ.

ಫೆ. 14ಕ್ಕೆ ಪೇರೋಡ್ ಮುಹಮ್ಮದ್ ಅಝ್‌ಹರಿ ಅವರು ಪ್ರಭಾಷಣ ಮಾಡಲಿದ್ದಾರೆ. ಫೆ. 15ರಂದು ರಾತ್ರಿ ನಡೆಯುವ ಸಮಾರೋಪ ಸಮಾರಂಭವನ್ನು ಎನ್‌ಪಿಎಂ ಝೈನುಲ್ ಅಬಿದೀನ್ ತಂಙಳ್ ಕುನ್ನಂಕೈ ಅವರು ಉದ್ಘಾಟಿಸಲಿದ್ದಾರೆ. ಅಲ್ ಹಾಫಿಲ್ ಅಹಮ್ಮದ್ ಕಬೀರ್ ಬಾಖವಿ ಕಾಞತಾರ್ ಅವರು ಪ್ರಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಹಲವಾರು ಮಂದಿ ಗಣ್ಯರು, ಪ್ರಮುಖ ಸಾದಾತ್ತುಗಳು, ಮತಪಂಡಿತರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಗಾಳಿಮುಖ ಪುದಿಯವಳಪ್ಪ್‌ನ ಕಾರ್ಯದರ್ಶಿ ಶಾಫಿ ಗೋಳಿತ್ತಡಿ, ನೆಟ್ಟಿಣಿಗೆಮುಡ್ನೂರು ಗ್ರಾ.ಪಂ ಸದಸ್ಯ ರಿಯಾಜ್ ಗೋಳಿತ್ತಡಿ, ನೂರುಲ್ ಇಸ್ಲಾಮಿಕ್ ಕಮಿಟಿ ಅಧ್ಯಕ್ಷ ಯಾಕೂಬ್ ಸಿ.ಎಚ್, ಕಾರ್ಯದರ್ಶಿ ಮುನೀರ್ ಜಿ.ಎಮ್ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here