![](https://puttur.suddinews.com/wp-content/uploads/2025/02/IMG-20250210-WA0112.jpg)
ಬಡಗನ್ನೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪರಿಸರದಲ್ಲಿರುವ ಬಿಲ್ವಾಶ್ವತ್ಥ ಕಟ್ಟೆಯ ಅಶ್ವತ್ಥವೃಕ್ಷಕ್ಕೆ ಅಶ್ವತ್ಥೋಪನಯನ ಹಾಗೂ ವಿವಾಹ ಕಾರ್ಯಕ್ರಮ ಬ್ರಹ್ಮಶ್ರೀ ವೇ ಮೂ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೆ.ಮೂ. ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಫೆ.10 ರಂದು ನಡೆಯಿತು.
![](https://puttur.suddinews.com/wp-content/uploads/2025/02/IMG-20250210-WA0111.jpg)
![](https://puttur.suddinews.com/wp-content/uploads/2025/02/IMG-20250210-WA0116.jpg)
ಸಂಸ್ಕಾರ ಚೌಕಟ್ಟು ಇದ್ದಾಗ ಜೀವನಕ್ಕೆ ಬೆಲೆ ಬರುತ್ತದೆ -ಕಾಸಕೋಡಿ ಸೂರ್ಯನಾರಾಯಣ ಭಟ್
ಪ್ರಕೃತಿಯಲ್ಲಿ ಹುಟ್ಟಿದ ಎಲ್ಲಾ ಚರಚರ ಜಗತ್ತಿಗೆ ಸಂಸ್ಕಾರ ನಡೆಯುತ್ತದೆ.ಮಾನವ ಸಂಕುಲಗಳಂತೆ ಬ್ರಹ್ಮಾದಿ ದೇವತೆಗಳಿಗೂ ಸಂಸ್ಕಾರ ಪುರಾಣ ಕಾಲದಲ್ಲೂ ನಡೆಯುತ್ತಿತ್ತು.ಮಾನವರಿಗೆ 16 ರೀತಿಯ ಸಂಸ್ಕಾರ ಪದ್ದತಿ ಇದೆ.ಆದರೆ ಈಗ 4 ಮಾತ್ರ ಆಚರಣೆಯಲ್ಲಿದೆ. ಸಮಾಜದಲ್ಲಿ ಹುಟ್ಟಿದ ಮಗವಿಗೆ ನಾಮಕರಣ, ಅನ್ನಪ್ರಸಾನ, ಉಪನಯನ, ಮತ್ತು ವಿವಾಹ ಎಂಬ ನಾಲ್ಕು ವಿವಿಧ ಸಂಸ್ಕಾರ ದೃಷ್ಟಿಯಿಂದ ಉಳಿದುಕೊಂಡಿದೆ. ಅದು ಕೂಡ ಯಾಂತ್ರಿಕವಾಗಿದೆ. ಇದರ ಬಗ್ಗೆ ವಿಮರ್ಶಿಸಬೆಕಾದ ಅನಿವಾರ್ಯತೆ ಇದೆ. ಮಾನವ ಅಥವಾ ದೈವದೇವಾದಿಗಳಿಗೆ ಸಂಸ್ಕಾರ ಚೌಕಟ್ಟು ಇದ್ದಾಗ ಮಾತ್ರ ಜೀವನದಲ್ಲಿ ಬೆಲೆ ದೊರಕುತ್ತದೆ. ಗಂಡಸು ಅಂತಾದರೆ ಒಂದು ವರ್ಷ ಮಾತ್ರ ಬಹ್ಮರಂಧ್ರ ತೆರದು ಸೂರ್ಯ ರಶ್ಮಿ ಒಳಗೆ ಪ್ರವೇಶ ಮಾಡುತ್ತದೆ. ಹೆಂಗಸರಿಗೆ ಎರಡನೇ ಬಾರಿ ಗಬ್ಬದಲ್ಲಿ ಮಗು ಇರುವಂತ ಸಂದರ್ಭದಲ್ಲಿ ಬಹ್ಮರಂಧ್ರ ತೆರೆಯುತ್ತದೆ. ಬೈದಲೆಯನ್ನು ಬಾಚುವುದಕ್ಕೆ ಸೀಮಂತ ಅನ್ನುತ್ತಾರೆ. ಸೀಮಂತ ದಿವಸ ಅಡಿಕೆ ಮರದ ಹಿಂಗಾರ, ಅತ್ತಿಮರದ ಕಾಯಿ ಗೊಂಚಲು ಅಥವಾ ಮುಳ್ಳು ಹಂದಿಯ ಮುಳ್ಳಿಂದ ಗಂಡನಾದವ ಹಿಂದೆ ನಿಂತು ತಲೆಯನ್ನು ಬಾಚಬೇಕು ಅಗ ತಲೆಭಾಗ ತೆರೆದು ಸೂರ್ಯರಶ್ಮಿ ಪ್ರವೇಶಿಸಿ ಗಬ್ಬದಲ್ಲಿರುವ ಮಗುವಿಗೆ ಸಂಸ್ಕಾರ ಮಾಡುತ್ತದೆ. ಅದೇ ರೀತಿ ಅಶ್ವಥಕ್ಕೂ ಯುಪ ಸಂಸ್ಕಾರ ನಡೆದಾಗ ಸರಿಯಾದ ಫಲ ದೊರೆಯುತ್ತವೆ. ಶನಿವಾರ ಒಂದು ದಿವಸ ಮಾತ್ರ ಅಶ್ವಥ ಮರವನ್ನು ಮುಟ್ಟಿ ನಮಸ್ಕಾರ ಮಾಡಿ 7 ಸುತ್ತು ಪ್ರದಕ್ಷಿಣೆ ಮಾಡಿದಲ್ಲಿ ಮನುಷ್ಯನಿಗೆ ಬರುವ ಶನಿ ದೋಷ, ಹಾಗೂ ಸಂತಾನ ಸಮಸ್ಯೆ, ಮತ್ತಿತರ ದೋಷ ಪರಿಹಾರವಾಗುತ್ತದೆ ಎಂಬ ಪ್ರತೀತಿ ಪುರಾತನ ಕಾಲದಿಂದಲೂ ಹಿರಿಯರು ನಂಬಿಕೊಂಡು ಬಂದಿರುವ ಸತ್ಯ. ಅಶ್ವಥಕ್ಕೆ ಒಂದು ಸಾವಿರ ಎಲೆ ತುಂಬಿದಾಗ ಅತ್ತಿ, ನೆಲ್ಲಿ ಅಥವಾ ತುಳಸಿ ಈ ಮೂರಲ್ಲಿ ಯಾವುದಾರೂ ಒಂದನ್ನು ತಂದು 16 ಸೋತ್ರ, ವನಸ್ಪತಿ ಮಂತ್ರ ಉಪನಯನ ಮಾಡುವ ಜೊತೆಗೆ ವಿವಾಹ ಕಾರ್ಯಕ್ರಮ ನಡೆಸಲಾಗಿದೆ ಎಂದು ಪೌರಾತ್ಯರಾದ ಕಾಸಕೋಡಿ ಸೂರ್ಯ ನಾರಾಯಣ ಭಟ್ ಅಶ್ವಥಕ್ಕೆ ಯುಪಸಂಸ್ಕಾರ ಬಗ್ಗೆ ವಿವರಿಸಿದರು.
![](https://puttur.suddinews.com/wp-content/uploads/2025/02/IMG-20250210-WA0111-1.jpg)