ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ರಮೇಶ್ ಬಾಣಜಾಲು ಆಯ್ಕೆಯಾಗಿದ್ದಾರೆ.
ಫೆ.8ರಂದು ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಝೀಜ್, ಸದಸ್ಯರಾಗಿ ನಳಿನಿ, ಸವಿತಾ, ಗಣೇಶ್ ಕುಮಾರ್, ನೆಬಿಸ್ಸಾ, ರುಕ್ಯ, ಮುಬೀನಾ, ಸೈರಿಯಾ, ಆಯಿಷಾ, ಝೂರಾ, ಅಬ್ದುಲ್ ಅಝೀಜ್, ಅಸ್ಮಾ, ಸಾಜಿದಾ, ಝುಬೈದಾ, ಜಮೀಳಾ, ಧನಂಜಯ, ಜೈನಾಬಿ ಆಯ್ಕೆಯಾದರು.
ಶಾಲಾ ಮುಖ್ಯಗುರು ಪ್ರೇಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಆನಂದ ಗೌಡ ಸ್ವಾಗತಿಸಿ, ಸರಿತ ಬಿ.ವಂದಿಸಿದರು. ಪುಷ್ಪ ವಿ. ಪೋಷಕರ ಪಟ್ಟಿ ವಾಚಿಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಲೋಕೇಶ್ ಬಾಣಜಾಲು, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಕೆ.ಇ. ಅಬೂಬಕ್ಕರ್, ಶಿಕ್ಷಕರು ಮತ್ತು ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು.