ನೆಲ್ಯಾಡಿ: ನೆಲ್ಯಾಡಿ ಗ್ರಾ.ಪಂ.ನ ಶೇ.25ರ ಎಸ್‌ಸಿ/ಎಸ್‌ಟಿ ಹಾಗೂ ವಿಕಲಚೇತನರ ಅನುದಾನದಲ್ಲಿ ನೆಲ್ಯಾಡಿ ಗ್ರಾಮದ 4ನೇ ವಾರ್ಡ್‌ನ ಸುಮಾರು 70 ಕುಟುಂಬಗಳಿಗೆ ಟೇಬಲ್ ಹಾಗೂ ಚಯರ್ ವಿತರಣೆ ಮಾಡಲಾಯಿತು.

ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು ಚಯರ್ ಹಾಗೂ ಟೇಬಲ್ ವಿತರಿಸಿದರು. ಕರಾಯ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಗುರು ಮಹಾಲಿಂಗ, ಬಿಎಸ್‌ಎನ್‌ಎಲ್‌ನ ನಿವೃತ್ತ ಅಧಿಕಾರಿ ಡಾಕಯ್ಯ, ಗ್ರಾ.ಪಂ.ಸದಸ್ಯರಾದ ಪಷ್ಪಾ, ಜಯಲಕ್ಷ್ಮೀಪ್ರಸಾದ್, ಪಿಡಬ್ಲ್ಯುಡಿ ಗುತ್ತಿಗೆದಾರ ಶಿವಪ್ರಕಾಶ್, ವಾರ್ತಭಾರತಿ ಪತ್ರಿಕೆಯ ಸಮೀರುದ್ದೀನ್, ಉದ್ಯಮಿ ಹನೀಫ್ ಯು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸಿಬ್ಬಂದಿ ಶಿವಪ್ರಸಾದ್ ಸ್ವಾಗತಿಸಿ, ನಿರೂಪಿಸಿದರು.