ಕಡಬದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿರುವ ಸಯ್ಯದ್ ಮೀರಾ ಸಾಹೇಬ್ ಗೆ ನೆಕ್ಕಿತ್ತಡ್ಕ ಉರೂಸ್ ಸಮಾರಂಭದಲ್ಲಿ ಸನ್ಮಾನ

0

ಕಡಬ:ಕಳೆದ ಐವತ್ತು ವರ್ಷಗಳಿಂದ ಸಮಾಜಸೇವಕರಾಗಿ, ಜನಪ್ರತಿನಿಧಿಯಾಗಿ, ರಾಜಕೀಯ ನಾಯಕನಾಗಿ, ಗುರುತಿಸಿಕೊಂಡು ಶೈಕ್ಷಣಿಕ ಕ್ಷೇತ್ರ, ಸಾರಿಗೆ, ಆರೋಗ್ಯ, ವಿದ್ಯುತ್, ರಸ್ತೆ, ನೀರು, ಸೇತುವೆ, ಶಾಲೆ, ಮಸೀದಿ ಮದರಸ, ದೇವಸ್ಥಾನ ಸೇರಿದಂತೆ ಕಡಬದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿರುವ ಹಾಗೂ ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿರುವ ಕಡಬ ತಾಲೂಕು ಹೋರಾಟ ಸಮಿತಿಯ ಮುಂಚೂಣಿ ನಾಯಕರು, ಇತ್ತೀಚೆಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡಬ ತಾಲೂಕು ಆಡಳಿತದಿಂದ ಸನ್ಮಾನಿತಗೊಂಡ ಸಮಾಜ ಸೇವಕ, ದಕ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಕಡಬ ಅವರನ್ನು ನೆಕ್ಕಿತ್ತಡ್ಕ ಮಖಾಂ ಉರೂಸ್ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಲವು ಮಂದಿ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here