





ಪುತ್ತೂರು:ಸ್ಥಳೀಯ ನಗರಸಭೆ ಸದಸ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಮ ನಿರ್ದೇಶಿತ ಸದಸ್ಯರಾದ ರಾಬಿನ್ ತಾವ್ರೋರವರು ಸುಮಾರು ಹದಿನೈದು ಸಾವಿರ ರೂಪಾಯಿ ಮೌಲ್ಯದ ಕ್ರೀಡಾ ಪರಿಕರಗಳನ್ನು ಕಾಲೇಜಿಗೆ ಉಚಿತವಾಗಿ ನೀಡಿದರು.


ವಾಲಿಬಾಲ್, ತ್ರೋಬಾಲ್, ಶಟಲ್ ಬ್ಯಾಡ್ಮಿಂಟನ್, ರಾಕೆಟ್ ಸಹಿತ ಹಲವಾರು ಕ್ರೀಡಾ ಸಾಮಗ್ರಿಗಳನ್ನು ನೀಡಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ದುರ್ಗಪ್ಪ ಎನ್ ಹಾಗೂ ಸದಸ್ಯರಾದ ಜೆರೋಮಿಯಸ್ ಪಾಯಿಸ್, ಮಹಮದ್ ಇಸ್ಮಾಯಿಲ್, ದಿನೇಶ್ ಕಾಮತ್, ಶ್ರೀಮತಿ ಮೋಹಿನಿ, ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಭರವಸ ಕೋಶದ ಸಂಚಾಲಕರಾದ ಪುಷ್ಪರಾಜ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚಿದಾನಂದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲರಾದ ಸುಬ್ಬಪ್ಪ ಕೈಕಂಬರವರು ರಾಬಿನ್ ತಾವ್ರೋ ಅವರ ಕೊಡುಗೆಯನ್ನು ಸ್ಮರಿಸಿಕೊಂಡು ಕೃತಜ್ಞತೆ ಸಮರ್ಪಿಸಿದ್ದಾರೆ.















