ಪುತ್ತೂರು: ಅರಿಯಡ್ಕ ಗ್ರಾಮದ ಅಮೈ ಪಯಂದೂರು ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ನೇಮೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಫೆ.19 ರಿಂದ ಆರಂಭಗೊಂಡು 21 ರವರೆಗೆ ನಡೆಯಲಿದೆ.
ಫೆ.19 ರಂದು ಬೆಳಿಗ್ಗೆ ಗಣಪತಿ ಹೋಮ, ಉಳ್ಳಾಕುಲು ಕದಿಕೆ ಚಾವಡಿಯಲ್ಲಿ ಶುದ್ದ ಕಲಶ ಮತ್ತು ತಂಬಿಲ ಸೇವೆ ಪುರೋಹಿತರಿಂದ ನಡೆಯಲಿದೆ ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಳ್ಳಲಿದೆ. ಮಧ್ಯಾಹ್ನ ಕದಿಕೆ ತುಂಬಿಸುವ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮುಗೇರು ಕದಿಕೆ ಚಾವಡಿಯಿಂದ ಭಂಡಾರ ತರುವ ಕಾರ್ಯಕ್ರಮ ನಡೆದು ಅರಿಯಡ್ಕ ಗ್ರಾಮದ ದೈವ ಶ್ರೀ ಧೂಮಾವತಿ ದೈವದ ಭಂಡಾರವನ್ನು ಕುತ್ಯಾಡಿ ದೈವಸ್ಥಾನದಿಂದ ತಂದು ಉತ್ಸವ ಮಂಟಪದಲ್ಲಿ ಏರಿಸುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ಅಮೈ ತರವಾಡು ದೈವಸ್ಥಾನದಿಂದ ಪಂಜುರ್ಲಿ ದೈವದ ಭಂಡಾರ ತಂದು ಉತ್ಸವ ಮಂಟಪದಲ್ಲಿ ಏರಿಸುವ ಕಾರ್ಯಕ್ರಮ ಹಾಗೂ ಪಯಂದೂರು ಶ್ರೀ ಉಳ್ಳಾಕುಲು ದೈವ ಮತ್ತು ಶ್ರೀ ವ್ಯಾಘ್ರ ಚಾಮುಂಡಿ ದೈವಗಳ ಭಂಡಾರವನ್ನು ತಂದು ಉತ್ಸವ ಮಂಟಪದಲ್ಲಿ ಏರಿಸುವ ಕಾರ್ಯಕ್ರಮ ನಡೆಯಲಿದೆ.
ಫೆ.20 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಧೂಮಾವತಿ ದೈವದ ತಂಬಿಲ ಕೊಲ್ಲಾಜೆ ಗೋಳಿಯಲ್ಲಿ ನಡೆಯಲಿದೆ. 10 ಗಂಟೆಗೆ ಶ್ರೀ ಕಿನ್ನಿಮಾಣಿ ದೈವದ ನೇಮ ನಡೆದು ಗಂಧ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಪೂಮಾಣಿ ದೈವದ ನೇಮ, ಗಂಧ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಕುಣಿತ ಭಜನೆ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಪಂಜುರ್ಲಿ, ಗುಳಿಗ ದೈವದ ನೇಮ ನಡೆದು ಗಂಧ ಪ್ರಸಾದ ವಿತರಣೆ ನಡೆಯಲಿದೆ.
ಫೆ.21 ರಂದು ಬೆಳಿಗ್ಗೆ ಶ್ರೀ ಪಿಲಿಭೂತ ದೈವದ ನೇಮ,ಶ್ರೀ ಧೂಮಾವತಿ ದೈವದ ನೇಮ ನಡೆದು ಗಂಧ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 3 ಗಂಟೆಗೆ ಶ್ರೀ ಉಳ್ಳಾಕುಲು ದೈವದ ಭಂಡಾರ, ಶ್ರೀ ಪಂಜುಲಿ ದೈವದ ಭಂಡಾರ, ಶ್ರೀ ಧೂಮಾವತಿ ದೈವದ ಭಂಡಾರಗಳನ್ನು ಆಯಾಯ ಸ್ವಸ್ಥಾನಗಳಿಗೆ ಹಿಂತಿರುಗಿಸುವ ಕಾರ್ಯಕ್ರಮ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೈವಸ್ಥಾನದ ಗೌರವಾಧ್ಯಕ್ಷ ಎ.ಚಿಕ್ಕಪ್ಪ ನಾಕ್ ಅರಿಯಡ್ಕ, ಮೊಕ್ತೇಸರರುಗಳಾದ ಡಾ.ಜಯರಾಮ ಶೆಟ್ಟಿ ಬಜ್ಪೆ, ಸುಲೋಚನಾ ಜೆ.ಶೆಟ್ಟಿ, ಎ.ಕೆ ರೈ ಅರಿಯಡ್ಕ, ನಾರಾಯಣ ರೈ ಮಡ್ಯಂಗಳಗುತ್ತು, ಸೋಮಪ್ಪ ರೈ ಅಮೈ ಹಾಗೂ ಉತ್ಸವ ಸಮಿತಿಯ ಸದಸ್ಯರುಗಳ ಹಾಗೂ ಊರ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.