ನರಿಮೊಗರು ಕೈಪಂಗಳ ಮಂಟಮೆ ಶಿರಾಡಿ ದೈವದ ವಾರ್ಷಿಕ ನೇಮೋತ್ಸವದ ಪೂರ್ವಭಾವಿ ಸಭೆ

0

ಎ.23 ಗೊನೆಮುಹೂರ್ತ
ಎ.30 ದೈವದ ಭಂಡಾರ ತೆಗೆಯುವುದು
ಮೇ.1 ನೇಮೋತ್ಸವ

ಪುತ್ತೂರು:ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳ ಶ್ರೀ ಶಿರಾಡಿ ದೈವಸ್ಥಾನದಲ್ಲಿ ನಡೆಯಲಿರುವ ಪ್ರಥಮ ವಾರ್ಷಿಕ ನೇಮೋತ್ಸವದ ಕುರಿತು ಭಕ್ತಾದಿಗಳ ಪೂರ್ವಭಾವಿ ಸಭೆಯು ಫೆ.17ರಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ.ವಿ ನಾರಾಯಣರವರ ಅಧ್ಯಕ್ಷತೆಯಲ್ಲಿ ದೈವಸ್ಥಾನದಲ್ಲಿ ನಡೆಯಿತು.


ದೈವಜ್ಞರು ಹಾಗೂ ತಂತ್ರಿಗಳಾದ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ಮಾರ್ಗದರ್ಶನಂದತೆ ಮೇ.1ರಂದು ದೈವದ ನೇಮೋತ್ಸವವನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು. ಇದಕ್ಕೆ ಪೂರ್ವಭಾವಿಯಾಗಿ ಏ.23ರಂದು ಗೊನೆಮುಹೂರ್ತ ನೆರವೇರಿಸುವುದು, ಏ.30 ರಾತ್ರಿ ದೈವದ ಭಂಡಾರ ತೆಗೆದು ನಂತರ ಅನ್ನಸಂತರ್ಪಣೆ ನಡೆದು ಮೇ.1ರಂದು ದೈವದ ನೇಮ ನಡೆಸುವುದಾಗಿ ತೀರ್ಮಾನಿಸಲಾಯಿತು. ಅಲ್ಲದೆ ದೈವಸ್ಥಾನದ ಬಳಿ ಸುಮಾರು ರೂ.5ಲಕ್ಷ ವೆಚ್ಚದಲ್ಲಿ ಪ್ರಸ್ತಾವಿತ ಕಟ್ಟಡ ನಿರ್ಮಾಣ ಮಾಡುವುದು ಹಾಗೂ ವಾರ್ಷಿಕ ನೇಮೋತ್ಸವದ ವೆಚ್ಚಕ್ಕಾಗಿ ಗ್ರಾಮದ ಪ್ರತಿ ಮನೆಗಳಿಂದ ರೂ.1000ದಂತೆ ದೇಣಿಗೆ ನಿಗಧಿ ಮಾಡುವುದಾಗಿ ತೀರ್ಮಾನಿಸಲಾಯಿತು.


ಆಡಳಿತ ಮಂಡಳಿ ಗೌರವಾಧ್ಯಕ್ಷ ಯತೀರಾಜ್ ಜೈನ್ ಕೈಪಂಗಳ ಗುತ್ತು, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಕೋಶಾಧಿಕಾರಿ ಗುರುಪ್ರಸಾದ್ ಆಳ್ವ, ಉಪಾಧ್ಯಕ್ಷರಾದ ಬೆಳಿಯಪ್ಪ ಗೌಡ ಕೆದ್ಕಾರ್, ಯೋಗೀಶ್ ನಾಕ್ ಗಡಿಪ್ಪಿಲ, ಮೋನಪ್ಪ ಮೂಲ್ಯ ಕೈಪಂಗಳ ಬಾರಿಕೆ, ವಿಜಯ ಕುಮಾರ್ ರೈ ಕೈಪಂಗಳ ಗುತ್ತು, ವಸಂತ ಪೂಜಾರಿ ಸರ್ವೆದೋಳ, ಪ್ರಭಾಕರ ಗೌಡ ಕೆದ್ಕಾರ್, ತಿಮ್ಮಪ್ಪ ಗೌಡ ನಡುಬೈಲು, ಗಣೇಶ್ ಸಾಲಿಯಾನ್ ದೋಳ, ರಮೇಶ್ ಗೌಡ ಮುಂಡತ್ತೋಡಿ, ದೇರಣ್ಣ ಶೆಟ್ಟಿ ನಡುಬೈಲು, ಮೋನಪ್ಪ ಗೌಡ ನಡುಬೈಲು, ಚಂದ್ರಹಾಸ ಗೌಡ ನಡುಬೈಲು, ಉಮೇಶ್ ಗೌಡ ಕೆದ್ಕಾರು, ಕೇಶವ ಪೂಜಾರಿ ಮುಕ್ವೆ, ಪುಟ್ಟಣ್ಣ ಮಜಲುಮಾರು, ಸಹಿತ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here