ಪುತ್ತೂರು ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

0

ಪುತ್ತೂರು:ಪುತ್ತೂರು ತಾಲೂಕು ಸರಕಾರಿ ನೌಕರರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಎಲ್ಲಾ 15 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಸ್ಥಾನದಿಂದ ಅಬಕಾರಿ ಇಲಾಖೆಯ ವಿಜಯ ಕುಮಾರ್ ಕೆ., ಅರಣ್ಯ ಇಲಾಖೆಯಿಂದ ಶಿವಾನಂದ ಆಚಾರ್ಯ, ಆರೋಗ್ಯ ಇಲಾಖೆಯ ಎಫ್‌ಜಿಎಂ ಗೌಡ, ತೋಟಗಾರಿಕಾ ಇಲಾಖೆಯ ಸುಧೀರ್ ಪಿ., ಪದವಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಹರಿಪ್ರಕಾಶ್ ಬೈಲಾಡಿ, ಪ್ರೌಢಶಾಲಾ ಶಿಕ್ಷಣ ಇಲಾಖೆಯ ಅಬ್ರಹಾಂ ಎಸ್.ಎ., ಪ್ರಾಥಮಿಕ ಶಿಕ್ಷಣ ಇಲಾಖೆಯ ಮಹಮ್ಮದ್ ಅಶ್ರಫ್, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ., ಸಾರಿಗೆ ಇಲಾಖೆಯ ಗಣೇಶ್ ಕೆ.ಎಂ., ಪರಿಶಿಷ್ಠ ಜಾತಿ ಮೀಸಲು ಸ್ಥಾನದಿಂದ ನ್ಯಾಯಾಂಗ ಇಲಾಖೆಯ ಚಂದ್ರಶೇಖರ ನಾಯ್ಕ, ಪರಿಶಿಷ್ಠ ಪಂಗಡ ಮೀಸಲು ಸ್ಥಾನದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹರಿಣಾಕ್ಷಿ ಬಿ., ಹಿಂದುಳಿದ ವರ್ಗ ‘ಎ’ ಸ್ಥಾನದಿಂದ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಸಂದೀಪ್, ಹಿಂದುಳಿದ ವರ್ಗ ‘ಬಿ’ ಸ್ಥಾನದಿಂದ ಪಂಚಾಯತ್ ರಾಜ್ ಇಲಾಖೆಯ ನಾಗೇಶ್ ಎಂ., ಮಹಿಳಾ ಸ್ಥಾನದಿಂದ ತನುಜಾ ಎಂ.ಕೆ. ಹಾಗೂ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಕವಿತಾ ಕೆ.ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಒಟ್ಟು 15 ಸ್ಥಾನಗಳಲ್ಲಿ 14 ಸ್ಥಾನಗಳಿಗೆ ತಲಾ ಒಂದು ನಾಮಪತ್ರಗಳು ಸಲ್ಲಿಕೆಯಾಗಿತ್ತು. ಪದವಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಹರಿಪ್ರಕಾಶ್ ಬೈಲಾಡಿ ಹಾಗೂ ಧರ್ಣಪ್ಪ ಗೌಡ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಫೆ.17ರಂದು ಧರ್ಣಪ್ಪ ಗೌಡ ನಾಮಪತ್ರ ಹಿಂತೆಗೆದುಕೊಂಡಿದ್ದು ಎಲ್ಲಾ 15 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಬಂಟ್ವಾಳದ ಸೌಮ್ಯ ಚುನಾವಣಾಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ಭಟ್ ಐ. ಹಾಗೂ ಸಿಬಂದಿ ನವ್ಯ ಹೆಚ್. ಸಹಕರಿಸಿದರು.

LEAVE A REPLY

Please enter your comment!
Please enter your name here